30.8 C
Udupi
Saturday, April 18, 2026
spot_img
spot_img
HomeBlogಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ, "ಶ್ರೀ ಶ್ರೀ ರವಿಶಂಕರ ಕಾರ್ಕಳ ವಿದ್ಯಾಮಂದಿರದ ಸಾಧನೆ"

ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ, “ಶ್ರೀ ಶ್ರೀ ರವಿಶಂಕರ ಕಾರ್ಕಳ ವಿದ್ಯಾಮಂದಿರದ ಸಾಧನೆ”

ಕಾರ್ಕಳ: ಪ್ರಸಕ್ತ ಶೈಕ್ಷಣಿಕ ವರ್ಷ 2025–26ರ ಸಿಬಿಎಸ್ಸಿ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲೆಯು ನಿರಂತರವಾಗಿ 100% ಫಲಿತಾಂಶವನ್ನು ಈ ವರ್ಷವೂ ಗಳಿಸುವುದರೊಂದಿಗೆ ಕಳೆದ ಹಲವಾರು ವರ್ಷಗಳಿಂದ ಗಳಿಸಿಕೊಂಡು ಬಂದ ಶೈಕ್ಷಣಿಕ ಸಾಧನೆಯನ್ನು ಈ ವರ್ಷವೂ ಸಾಧಿಸಿದೆ. ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.(ಐಚ್ಚಿಕ ವಿಷಯಗಳನ್ನು ಹೊರತುಪಡಿಸಿ)
ಇವರಲ್ಲಿ ಮನಸ್ವಿ ಎಂ. ದೇವಾಡಿಗ 92.6% ಅಂಕವನ್ನು ಗಳಿಸುವುದರೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ.ಅನನ್ಯ ನಾಯಕ್ 91.4% ಅಂಕವನ್ನು ಗಳಿಸುವುದರೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ.ಸ್ವಪ್ನಿಲ್ ಶೆಟ್ಟಿ 91% ಅಂಕವನ್ನು ಗಳಿಸುವುದರೊಂದಿಗೆ ಶಾಲೆಗೆ ತೃತೀಯ ಸ್ಥಾನಿಯಾಗಿದ್ದಾನೆ.ಪರೀಕ್ಷಿತ್ ಬಿ.ಶೆಟ್ಟಿಗಾರ್ 90.8% ಅಂಕವನ್ನು ಗಳಿಸುವುದರೊಂದಿಗೆ 4ನೇ ಸ್ಥಾನ,ವೃದ್ಧಿ ಪೈ 89.8% ಅಂಕವನ್ನು ಗಳಿಸುವುದರೊಂದಿಗೆ 5ನೇ ಸ್ಥಾನ, ವಿಯೋನ್ ಶನಲ್ ಡಿ. ಸೋಜ 89.6% ಅಂಕವನ್ನು ಗಳಿಸುವುದರೊಂದಿಗೆ 6ನೇ ಸ್ಥಾನ,ಅನ್ವಿತ ಮೊಗೆರಾಯ 87% ಅಂಕವನ್ನು ಗಳಿಸುವುದರೊಂದಿಗೆ 7ನೇ ಸ್ಥಾನ,ವಂಶ್.ಎಂ 86.6% ಅಂಕವನ್ನು ಗಳಿಸುವುದರೊಂದಿಗೆ 8ನೇ ಸ್ಥಾನವನ್ನು ಗಳಿಸಿದ್ದಾರೆ.ಇಬ್ಬರು ವಿದ್ಯಾರ್ಥಿಗಳಾದ ಪರೀಕ್ಷಿತ್ ಬಿ.ಶೆಟ್ಟಿಗಾರ್, ವೃದ್ಧಿ ಪೈ ಸಂಸ್ಕೃತ ವಿಷಯದಲ್ಲಿ ನೂರು (100/100) ಅಂಕಗಳನ್ನು ಗಳಿಸಿದ್ದಾರೆ.


ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ, ಪೋಷಕರ ನಿರಂತರ ಬೆಂಬಲ ಹಾಗೂ ವಿದ್ಯಾರ್ಥಿಗಳ ಪ್ರಾಮಾಣಿಕ ಪರಿಶ್ರಮ ಕಾರಣವಾಗಿದೆ.
ಈ ಸಾಧನೆಯನ್ನು ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page