
ಪರಪ್ಪಾಡಿ, ನಿಟ್ಟೆ: 11ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಯಶಸ್ವಿ ಆಯೋಜನೆಗಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪರಪ್ಪಾಡಿ-ನಿಟ್ಟೆಯ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ವಿನೋದ್ ಪೂಜಾರಿ ಕುಡ್ಡೇಲು, ಕಾರ್ಯದರ್ಶಿಯಾಗಿ ಸುಧೀರ್ ನಿಟ್ಟೆ, ಉಪಾಧ್ಯಕ್ಷರಾಗಿ ದಿನೇಶ್ ಸುವರ್ಣ ಪರಪ್ಪಾಡಿ, ಮಹಿಳಾ ಅಧ್ಯಕ್ಷರಾಗಿ ಅಶ್ವಿನಿ ಎಸ್. ಕುಲಾಲ್, ಹಾಗೂ ಕೋಶಾಧಿಕಾರಿಗಳಾಗಿ ಪುನೀತ್ ಶೆಟ್ಟಿ ಮತ್ತು ಪ್ರಸುನ್ ಕುಲಾಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


















































