
ಸಾಣೂರು ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ :31.07.202ರಂದು ಅತಿಯಾದ ಮಳೆಯ ಕಾರಣದಿಂದ ಶಾಂಭವಿ ನದಿ ಪಕ್ಕದಲ್ಲಿ ಉಂಟಾದ ಪ್ರವಾಹದಿಂದ ನದಿ ತಟದ ಮನೆಗಳಿಗೆ ನೀರು ಬಂದು ಮುಳುಗಡೆಯಾದ್ದರಿಂದ ಪ್ರವಾಹ ಪೀಡಿತ 05 ಕುಟುಂಬದವರನ್ನು ಸ್ಥಳಾಂತರಿಸಲಾಯಿತು.ಹಾಗೂ ಮಠದ ಕೆರೆಯ ನೀರಿನ ಮಟ್ಟ ಏರಿಕೆಯಾಗದಿರುವ ಬಗ್ಗೆ ಭೇಟಿ ಮಾಡಿ ಖಚಿತಪಡಿಸಿಕೊಳ್ಳಲಾಯಿತು. ಶುಂಠಿಗುಡ್ದೆ ಪರಿಸರದಲ್ಲಿ ರಸ್ತೆಯ ಬದಿಯಲ್ಲಿ ಭೂಕುಸಿತ ಸಂಭವಿಸಿದ್ದರಿಂದ ರಸ್ತೆ ಸಂಪೂರ್ಣ ಮುಚ್ಚಿದ್ದು ಮೆಸ್ಕಾಂ ಲೈನ್ ಮೇಲೆ ಮರ ಬಿದ್ದಿದ್ದರಿಂದ ತೆರವು ಕಾರ್ಯಾಚರಣೆಯನ್ನು ಬೆಳಗ್ಗೆವರೆಗೆ ತಾತ್ಕಾಲಿಕವಾಗಿ ಮುಂದೂಡಿ ಬೆಳಗ್ಗೆ ತೆರವು ಮಾಡಲಾಯಿತು.ಒಂದು ಮನೆಯ ಛಾವಣಿಗೆ ಹಾನಿಯಾಗಿರುತ್ತದೆ.ಸಾರ್ವಜನಿಕರ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ತುರ್ತು ಕಾರ್ಯಾಚರಣೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯುವರಾಜ್ ಜೈನ್.ಸದಸ್ಯರಾದ ಪ್ರಸಾದ್ ಪೂಜಾರಿ,ಕರುಣಾಕರ ಕೋಟ್ಯಾನ್ ಮತ್ತು ಪ್ರಕಾಶ್ ರಾವ್.ಪಿ.ಡಿ. ಓ ಮಧು ಎಂ.ಸಿ.ಗ್ರಾಮ ಆಡಳಿತ ಅಧಿಕಾರಿ ಸಂಗಮೇಶ.ಶೌರ್ಯ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷರಾದ ಮಾಧವ ಭಂಡಾರ್ಕರ್.ಯುವಕ ಮಂಡಲ ಸಾಣೂರು ಸದಸ್ಯರು.ಮೆಸ್ಕಾಂ ಇಲಾಖೆಯ ಮಧುಕುಮಾರ್ ಮತ್ತು ಸಿಬ್ಬಂದಿ,ಮಸೀದಿ ಬಳಿಯ ಎಲ್ಲ ಸಹೋದರರು.ಗ್ರಾಮ ಪಂಚಾಯಿತಿ ಸಿಬ್ಬಂದಿ ,ಗ್ರಾಮಸ್ಥರ ಸಹಕಾರದಿಂದ ಮಾಡಲಾಯಿತು











