
ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರಿನ ಶ್ರೀ ಸತ್ಯದೆಕ್ಕಿ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲೆ ದೇವಿ ಜೋಡುಗರಡಿಯ ವಾರ್ಷಿಕ ನೇಮೋತ್ಸವವು ದಿನಾಂಕ 1-04-2025 ರಿಂದ 5-04-2025 ರವರೆಗೆ ನಡೆಯಲಿದೆ.
ದಿನಾಂಕ 2-04-2025ನೇ ಬುಧವಾರದಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಧರ್ಮರಸು ಉಲ್ಲಾಯ ದೈವದ ನೇಮೋತ್ಸವ ನಡೆಯಲಿದ್ದು, ಬಳಿಕ 12 ಗಂಟೆಗೆ ಶ್ರೀ ಕುಕ್ಕಿನಂತಾಯ ದೈವ ಮತ್ತು ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆದ ಬಳಿಕ ಮಧ್ಯಾಹ್ನ 1:00 ಯಿಂದ 3:00ವರೆಗೆ ಸಾರ್ವಜನಿಕ ಅನ್ನಸಂಪರ್ಪಣೆ ನಡೆಯಲಿದೆ.
ದಿನಾಂಕ 3-04-2025ನೇ ಗುರುವಾರದಂದು ಬೆಳಗ್ಗೆ 07 ಗಂಟೆಗೆ ಹರಕೆ ಸ್ವೀಕಾರ, ಧರ್ಮದೈವದ ಪ್ರಸಾದ ವಿತರಣೆ ನಡೆಯಲಿದ್ದು ರಾತ್ರಿ 8:00ಗೆ ಬ್ರಹ್ಮ ಬೈದರ್ಕಳ ಅನ್ನ ನೈವೇದ್ಯ ಸೇವೆ ಹಾಗೂ 8:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 4-4.2025ನೇ ಶುಕ್ರವಾರದಂದು ರಾತ್ರಿ 9:00 ರಿಂದ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಲಿದ್ದು ದಿನಾಂಕ 5.4.2025ನೇ ಶನಿವಾರದಂದು ಬೆಳಗ್ಗೆ 10:30 ರಿಂದ ಮಾಯಂದಲೇ ದೇವಿ ನೇಮೋತ್ಸವ ಹರಕೆ ಸ್ವೀಕಾರ ನಡೆಯಲಿದೆ. ಬಳಿಕ ಮಧ್ಯಾಹ್ನ 12:30 ರಿಂದ 3 ಗಂಟೆಯವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ದೈವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸಾರ್ವಜನಿಕರೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.