
ಸಾಣೂರು: ಚಿಂತನ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಸಾಣೂರು ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ ರವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕುಕ್ಕುಂದೂರು ಆರೋಗ್ಯ ಇಲಾಖೆಯ ಆರೋಗ್ಯ ಸುರಕ್ಷಾ ಅಧಿಕಾರಿ ಕುಮುದಾವತಿ ಯವರು ಪೌಷ್ಠಿಕ ಆಹಾರದ ಪರಿಚಯ ಹಾಗೂ ಉಪಯೋಗಿಸುವ ವಿಧಾನ ಒಳಗೊಂಡ ಪೌಷ್ಟಿಕಾಂಶ ಹಾಗೂ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.
ವಿಶೇಷವಾಗಿ ಕೇಂದ್ರದ ಸದಸ್ಯರಾದ ಕರಿಬಸವೇಶ್ವರಿ ಹಾಗೂ ಗೀತಾ ರವರು ರಾಗಿ ಮುದ್ದೆ ಹಾಗೂ ಸೊಪ್ಪಿನ ಸಾರ್ ಪ್ರಾತ್ಯಕ್ಷಿಕೆ ಹಾಗೂ ರಾಜೇಶ್ವರಿ ಯವರು ಹೆಸರುಕಾಳು ದೋಸೆ,ಚಟ್ನಿ ಬಜ್ಜಿ, ಸೋಜಿ ಮಾಡಿ ಎಲ್ಲರಿಗು ರುಚಿ ಸವಿಯಲು ಕೊಟ್ಟರು. ಕಾರ್ಯಕ್ರಮದಲ್ಲಿ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ, ಸಾಣೂರು ವಲಯ ಮೇಲ್ವಿಚಾರಕರು ಪ್ರಸಾದ್ , ಸೇವಾ ಪ್ರತಿನಿಧಿ ಅರುಣಿ, ಮತ್ತು ಸದಸ್ಯರು ಉಪಸ್ಥಿತಿ ಇದ್ದರು.





