
ಸವಿಗಾನ ಮೆಲೋಡೀಸ್ ಕಾರ್ಕಳ ಆಯೋಜಿಸಲಾದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಸ್ಮಿತ್ ಎ.ಜೆ.ಮಂಗಳೂರು, ದ್ವಿತೀಯ ಬಹುಮಾನವನ್ನು ರಾಜೇಶ್ ಪ್ರಭು ಹೆಬ್ರಿ, ತ್ರತೀಯ ಬಹುಮಾನವನ್ನು ಆದ್ಯ ಪುರಾಣಿಕ್ ಕಾರ್ಕಳ ಪಡೆದುಕೊಂಡರು.
ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ಒಂಬತ್ತು ಸ್ಪರ್ಧಿಗಳಲ್ಲಿ ಉಳಿದ ಆರು ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು. ತೀರ್ಪುಗಾರರಾಗಿ ಹಿರಿಯ ಗಾಯಕ ದಿನೇಶ್ ಕಿನ್ನಿಗೋಳಿ, ಸಂಗೀತ ಶಿಕ್ಷಕಿ ಶ್ರುತಿ ಶಿಂಧೆ , ಗಾಯಕ ರಾಜೇಶ್ ಭಟ್ ಭಾಗವಹಿಸಿದ್ಧರು. ಹಿರಿಯ ಸಂಗೀತ ಶಿಕ್ಷಕ ಶ್ರೀ ಕ್ರಷ್ಣಪ್ಪ ರವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪ್ರಾಥಮಿಕ ಶಾಲೆ ಗುಂಡುಕಲ್ಲಿನ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ವಿಜಯ ಶೆಟ್ಟಿ, ನಿತ್ಯಾನಂದ ಪೈ, ಡಾಕ್ಟರ್ ಉಷಾಕಿರಣ್, ಡಾ.ಎಸ್ಪಿಬಿ ಅಸೋಸಿಯೇಷನ್ ಮಂಗಳೂರು, ಉಡುಪಿಯ ಸ್ಥಾಪಕರಾದ ಸಂತೋಷ್ ಅಂಚನ್, ಅಧ್ಯಕ್ಷರಾದ ಮೋಹನ್ ಪ್ರಸಾದ್, ಬಿಲ್ಲವ ಸಂಘ ಕಾರ್ಕಳದ ಅಧ್ಯಕ್ಷರಾದ ಪ್ರಮಲ್ ಭಾಗವಹಿಸಿದ್ದರು. ಸಂಚಾಲಕರಾದ ಸಂತೋಷ್ ಕುಮಾರ್ ಮೂಡುಬಿದಿರೆ ಸ್ವಾಗತಿಸಿದರು, ಸವಿಗಾನ ಮೆಲೋಡೀಸ್ ನ ಸ್ಥಾಪಕರಾದ ಪ್ರಕಾಶ್ ಕಾರ್ಕಳ ಪ್ರಸ್ತಾವನೆಗೈದರು. ಶ್ರುತಿ ಶಿಂಧೆಯವರು ಪ್ರಾರ್ಥನೆಗೈದರು. ಲತಾ ಪ್ರಕಾಶ್ ಧನ್ಯವಾದ ಸಲ್ಲಿಸಿದರು. ಸಂಚಾಲಕರಾದ ಸಂಧ್ಯಾ.ಎಸ್.ಶೆಟ್ಟಿ, ಸದಸ್ಯರಾದ ಸದಾಶಿವ ಶೆಟ್ಟಿ, ಪ್ರಾರ್ಥನಾ.ಕೆ.ಪಿ. ಉಪಸ್ಥಿತರಿದ್ದರು. ಗಾಯನ ಸ್ಪರ್ಧೆಯಲ್ಲಿ ಮಡಿಕೇರಿ, ಮಂಗಳೂರು, ಪುತ್ತೂರು, ಉಡುಪಿ, ಸುಳ್ಯ, ಬಂಟ್ವಾಳ ಹಾಗೂ ಕಾರ್ಕಳದಿಂದ ಗಾಯಕರು ಭಾಗವಹಿಸಿದ್ದರು. ಬಹುಮಾನ ವಿತರಣಾ ಸಮಾರಂಭದ ಬಳಿಕ ಸವಿಗಾನ ಮೆಲೋಡೀಸ್ ಕಾರ್ಕಳ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು.