
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಕಂಡುಬಂದರೆ ದೂರು ನೀಡುವಂತೆ ಆರೋಗ್ಯ ಇಲಾಖೆಯು ವಾಟ್ಸಪ್ ನಂಬರ್ ಬಿಡುಗಡೆಗೊಳಿಸಿದೆ.
ಸರ್ಕಾರಿ ಆಸ್ಫತ್ರೆಗಳ ಸೇವೆ ಕುರಿತು ದೂರು ಮತ್ತು ಸಲಹೆಗಳನ್ನ ನೀಡುವಂತೆ ತಿಳಿಸಿದ್ದು ಪೋಟೊ, ವೀಡಿಯೋ ಸಮೇತ ವಾಟ್ಸಪ್ ಮಾಡಿ ಸರ್ಕಾರಿ ಆಸ್ಫತ್ರೆಗಳಲ್ಲಿ ಸಮಸ್ಯೆ ಬಗ್ಗೆ ಸಾರ್ವಜನಿಕರು ವಾಟ್ಸಪ್ ನಂಬರ್ 9449843001ಗೆ ವಾಟ್ಸಾಪ್ ಮೂಲಕ ಮೆಸೇಜ್ ವಿಡಿಯೋ, ಪೋಟೋ ಕಳಿಸಿ ದೂರು ಸಲ್ಲಿಸಬಹುದಾಗಿದೆ.





















































