27.7 C
Udupi
Saturday, September 6, 2025
spot_img
spot_img
HomeBlogಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯೇ ತಕ್ಕಪಾಠ ಕಲಿಸಲಿದ್ದಾರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯೇ ತಕ್ಕಪಾಠ ಕಲಿಸಲಿದ್ದಾರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಹಗರಿಬೊಮ್ಮನಹಳ್ಳಿ: ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪಟ್ಟಣದ ಹಿಂದೂ ಮಹಾಗಣಪತಿ ಸಮಿತಿ 12ನೇ ವರ್ಷದ ಗಣೇಶೋತ್ಸವದ ಧರ್ಮ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದ್ದು ಈ ವೇಳೆ ಸರ್ಕಾರ ವಕ್ಫ್‌ ನೆಪದಲ್ಲಿ ರೈತರ ಮತ್ತು ಮಠಾಧೀಶರ ಜಮೀನುಗಳಿಗೆ ಕೈ ಹಾಕಿದ್ದು ಎಷ್ಟರಮಟ್ಟಿಗೆ ಸಮಂಜಸ, ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯೇ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ನಮ್ಮವರು ಅಡ್ಜಸ್ಟ್ಮೆಂಟ್ ಬಿಟ್ಟು ಧರ್ಮ ಉಳಿಸಲು ಒಂದಾಗಬೇಕು. ಸನಾತನ ಧರ್ಮವನ್ನು ಅಪವಿತ್ರ ಮಾಡುವವರನ್ನು, ಧರ್ಮವನ್ನು ಅವಹೇಳನ ಮಾಡುವವರ ವಿರುದ್ಧ ಹೋರಾಟ ನಿಶ್ಚಿತ. ರಾಜ್ಯದಲ್ಲಿ ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತ ನಾಯಕತ್ವ ಬೇಕಿದೆ. ಧರ್ಮಸ್ಥಳದ ಸಮೀರ್‌ಗೆ ಗುಡ್ ಎಂದು ಲೈಕ್ ಕೊಟ್ಟವರು ನಮ್ಮವರೇ. ಗಣಪತಿ ಉತ್ಸವಕ್ಕೆ ನೂರಾರು ಕಂಡೀಷನ್ ಹಾಕ್ತಾರೆ. ಆದರೆ, ದಿನಕ್ಕೆ ಐದು ಭಾರಿ ಮೈಕ್ ಹಾಕುವವರಿಗೆ ಏನೂ ಅನ್ನೋಲ್ಲ. ಸನಾತನ ಧರ್ಮ ವಸುದೈವ ಕುಟುಂಬಕಂ ಪ್ರತಿಪಾದಿಸುತ್ತದೆ ಎಂದು ಹೇಳಿದರು.

ಇನ್ನು ಉಚ್ಚಾಟನೆ ಕುರಿತು ಮಾತನಾಡಿದ ಅವರು ಬಿಜೆಪಿಯಿಂದ ಉಚ್ಛಾಟನೆ ಆದ ನಂತರ ಬಹಳ ಪಾಪ್ಯುಲರ್ ಆಗಿರಿ ಎಂದು ಜನರು ಹೇಳುತ್ತಾರೆ, ನಿಜ ಅಂದ್ರೆ ನಮ್ಮವರು ನಾನು ಪಾಪ್ಯುಲರ್ ಆಗಲೀ ಅಂತಾನೆ ಉಚ್ಚಾಟನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ದೇವೇಗೌಡ ಉಚ್ಚಾಟಿಸಿದ್ದರು ಬಳಿಕ ಸಿಎಂ ಆದರು. ಯಡಿಯೂರಪ್ಪ ಅವರನ್ನೂ ಉಚ್ಛಾಟಿಸಿದ್ದರು ಸಿಎಂ ಆದರು. ಒಮ್ಮೆ ಕುಮಾರಸ್ವಾಮಿಯನ್ನು ಉಚ್ಛಾಟಿಸಲಾಗಿತ್ತು, ಸಿಎಂ ಆದರು. ಈಗ ನನ್ನ ಸರದಿ ನನ್ನನ್ನೂ ಉಚ್ಛಾಟಿಸಲಾಗಿದೆ, 2028ಕ್ಕೆ ಸಿಎಂ ಆಗುತ್ತೆನೇನೊ ನೋಡಬೇಕು ಎಂದು ಹೇಳಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page