
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಹಾಗೂ ಸರಕಾರಿ ಪ್ರೌಢಶಾಲೆ ಕಲ್ಯಾ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟವು ದಿನಾಂಕ 4/ 9 /2025 ರಂದು ಸರಕಾರಿ ಪ್ರೌಢಶಾಲೆ ಕಲ್ಯಾದಲ್ಲಿ ಜರಗಿತು.

ಸರಕಾರಿ ಪ್ರೌಢಶಾಲೆ ಕಲ್ಯಾದ ಬಾಲಕರ ತಂಡವು ತಾಲೂಕು ಮಟ್ಟದ ಚಾಂಪಿಯನ್ ಆಗಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ,ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಎಸ್.ಡಿ.ಎಮ್.ಸಿ ಹಾಗೂ ಹಳೆ ವಿದ್ಯಾರ್ಥಿ ಸಂಘ ಕ್ರೀಡಾಪಟುಗಳಿಗೆ ಅಭಿನಂದಿಸಿ ಶುಭ ಹಾರೈಸಿದ್ದಾರೆ..