
ಸರಕಾರಿ ಪ್ರೌಢಶಾಲೆ ,ಕಲ್ಯಾ- ಇಲ್ಲಿ ನೂತನ ಬೋರ್ ವೆಲ್ ಹಾಗೂ ಗೇಟುಗಳ ಉದ್ಘಾಟನಾ ಸಮಾರಂಭವು ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲೆಯ ಮೂಲಭೂತ ಅವಶ್ಯಕತೆಗಳಾದ ಬೋರ್ ವೆಲ್, ಶಾಲಾ ಪ್ರವೇಶ ದ್ವಾರ ಹಾಗೂ ಹಿಂಭಾಗದ ದ್ವಾರಕ್ಕೆ ಸುಭದ್ರವಾದ ಎರಡು ಗೇಟುಗಳು, ಶಟರ್ ಡೋರ್, ಮೆಶ್,ರೇಲಿಂಗ್ಸ್ ಗಳನ್ನು ಒದಗಿಸಿಕೊಟ್ಟ ಕೊಡುಗೈ ದಾನಿ ಶ್ರೀ ಕಾರ್ಕಳ ಕಮಲಾಕ್ಷ ಕಾಮತ್ ಇವರು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಭಾಸ್ಕರ್ ಟಿ. ಇವರೊಂದಿಗೆ, ಗಣ್ಯರ ಸಮಕ್ಷಮದಲ್ಲಿ ಈ ಉದ್ಘಾಟನೆಯನ್ನು ನೆರವೇರಿಸಿದರು.

ಕಲ್ಯಾ ಗ್ರಾಮ ಪಂಚಾಯತ್ ನ ವಾರ್ಡ್ ಸದಸ್ಯರಾದ ಶ್ರೀ ಸಂಜೀವ ಶೆಟ್ಟಿ, ಶ್ರೀ ಜಗದೀಶ್ ಆಚಾರ್ಯ, ಎಸ್. ಡಿ.ಎಂ.ಸಿ ಅಧ್ಯಕ್ಷ ಶ್ರೀ ಹರೀಶ್ ಕುಮಾರ್, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಸುಧೀರ್ ಶೆಟ್ಟಿ, ಮುಖ್ಯ ಶಿಕ್ಷಕ ಶ್ರೀ ಸುಭಾಷ್ ಚಂದ್ರ ಶೆಟ್ಟಿಗಾರ್, ಇತ್ತೀಚೆಗೆ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಶ್ರೀಮತಿ ಸುಮನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಶ್ರೀ ಸುಭಾಷ್ ಚಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ಶ್ರೀ ಕಮಲಾಕ್ಷ ಕಾಮತ್ ಇವರ ಪರಿಚಯವನ್ನು ಶ್ರೀಮತಿ ಸುಮನಾ ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಶಾಲಿನಿ ಬಿ.ಎಸ್. ಅಭಿನಂದನಾ ಪತ್ರ ವಾಚಿಸಿದರು.
ಇಂಗ್ಲಿಷ್ ಶಿಕ್ಷಕ ಶ್ರೀ ಗಣೇಶ್ ಕಾರ್ಯಕ್ರಮ ನಿರೂಪಿಸಿ ಶ್ರೀ ರಾಮ ಮೊಗೇರ್ ವಂದನಾರ್ಪಣೆಗೆ ಗೈದರು.
ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣದ ಪ್ರಾಧಾನ್ಯತೆಯ ಕುರಿತು ಶ್ರೀ ಕಮಲಾಕ್ಷ ಕಾಮತ್ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ನುಡಿಗಳನ್ನಾಡಿದರು.
ಶ್ರೀ ಕಮಲಾಕ್ಷ ಕಾಮತ್ ಅವರು ಶಾಲೆಗೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ಕೃತಜ್ಞತಾಪೂರ್ವಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಸುಮನಾ ಇವರು ಶಾಲಾ ವಿದ್ಯಾರ್ಥಿ ದತ್ತಿನಿಧಿಗೆ ರೂ 25,000 ದ ಚಕ್ಕನ್ನು ಮುಖ್ಯ ಶಿಕ್ಷಕರಿಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮಕ್ಷಮದಲ್ಲಿ ಹಸ್ತಾಂತರಿಸಿದರು.




















