27 C
Udupi
Sunday, April 12, 2026
spot_img
spot_img
HomeBlogಸರಕಾರಿ ಪದವಿ ಕಾಲೇಜು ಹಿರಿಯಡ್ಕ,ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ

ಸರಕಾರಿ ಪದವಿ ಕಾಲೇಜು ಹಿರಿಯಡ್ಕ,ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ

“ನಶೆ ಮುಕ್ತ ಸಮಾಜವನ್ನು ಕಟ್ಟಲು ಪಣ ತೋಡೋಣ,ಸಧ್ರಡ ಸಮಾಜ ನಿರ್ಮಿಸೋಣ”-ಸಂತೋಷ್ ಕಾರ್ಕಳ

ಹಿರಿಯಡ್ಕ:ಇಂದಿನ ಸಮಾಜದಲ್ಲಿ ಯುವ ಸಮುದಾಯ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಮಾದಕ ಸೇವನೆಯ ಚಟಕ್ಕೆ ದಾಸರಾಗುತ್ತಿರುವುದು ದುರದೃಷ್ಟಕರವಾದ ವಿಚಾರ. ಮಾದಕ ಸೇವನೆ ಚಟ ಒಮ್ಮೆ ರೂಡಿಸಿಕೊಂಡರೆ. ವಾಪಾಸು ಅದರಿಂದ ಬರಲು ತುಂಬಾ ಕಷ್ಟ. ಮಾದಕ ದ್ರವ್ಯ ಸೇವನೆಯಿಂದ ದೂರ ಇರುವಂತೆ. ನಶೆ ಮುಕ್ತ ಭಾರತ ನಿರ್ಮಿಸಲು ವಿದ್ಯಾರ್ಥಿಗಳು ಪಣ ತೊಡಬೇಕು. ಎಂದು ಹಿರಿಯಡ್ಕ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಸಂತೋಷ ಕಾರ್ಕಳ ರವರು ಹಿರಿಯಡ್ಕ ಸರಕಾರಿ ಪದವಿ ಕಾಲೇಜಿನಲ್ಲಿ ಸಂಪನ್ಮೂಲ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.

ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು,ಅಲ್ಲದೆ ಸೈಬರ್ ಅಪರಾಧ. ಪೋಕ್ಸ್ ಕಾಯಿದೆ. ಅಪ್ರಾಪ್ತರು ವಾಹನ ಚಲಾಯಿಸುವ ಬಗ್ಗೆ. ಅತಿಯಾದ ಮೊಬೈಲ್ ಬಳಕೆ ಬಗ್ಗೆ ಹಾಗೂ ಹೊಸ ಬಿ ಎನ್. ಎಸ್ ಕಾಯಿದೆ ಬಗ್ಗೆ ಮಾಹಿತಿ ನೀಡಿದರು.

ಕಾಲೇಜ್ ಉಪನ್ಯಾಸಕರಾದ ಶ್ರೀಮತಿ ವೀಣಾ ಡಿ ನಾಯಕ್ ರವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ದಿಂದ ದೂರ ಇರುವಂತೆ ಕಿವಿ ಮಾತು ಹೇಳಿದರು.ರಾಜ್ಯ ಶಾಸ್ತ್ರ ಉಪನ್ಯಾಸಕ ಶ್ರೀ ದೇವದಾಸ್ ಡಿ ಪ್ರಭು ರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಇತಿಹಾಸ ಉಪನ್ಯಾಸಕರಾದ ಶ್ರೀಮತಿ ಗೀತಾ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page