79ನೇ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ,ಕೆರ್ವಾಶೆ ಇಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಎಸ್ ಡಿ ಎಮ್ ಸಿ ಯ ಗೌರವಾನ್ವಿತ ಅಧ್ಯಕ್ಷರಾಗಿರುವ ಶ್ರೀಯುತ ನಾರಾಯಣ ಗುಡಿಗಾರ್ ಇವರು ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಶ್ರೀಯುತ ಧರ್ಮರಾಜ ಹೆಗ್ಡೆ, ಶ್ರೀಮತಿ ಪುಷ್ಪ ನಾಯಕ್ , ಎಸ್ ಡಿ ಎಂ ಸಿ ಯ ಉಪಾಧ್ಯಕ್ಷರಾಗಿರುವ ಶ್ರೀಮತಿ ರೂಪ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾನ್ವಿತ ಅಧ್ಯಕ್ಷರಾಗಿರುವ ಶ್ರೀಮತಿ ಸ್ವಾತಿ ವಿ.ನಾಯಕ್ , ಉಪಾಧ್ಯಕ್ಷರಾಗಿರುವ ಶ್ರೀಮತಿ ಮಾಲತಿ ಗುಡಿಗಾರ್, ಎಸ್ ಡಿ ಎಮ್ ಸಿ ಯ ಗೌರವಾನ್ವಿತ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಊರ ಹಾಗೂ ಪರವೂರ ಶಾಲಾಭಿಮಾನಿ ಬಂಧುಗಳು , ಪೋಷಕರು ,ಶಿಕ್ಷಕ ಬಂಧುಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ತದನಂತರ ಮಕ್ಕಳಿಂದ ಭಾಷಣ ,ದೇಶಭಕ್ತಿ ಗೀತೆ ಹಾಗೂ ನೃತ್ಯ ವೈವಿಧ್ಯಗಳು ಜರುಗಿದವು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ವತಿಯಿಂದ ಶಾಲಾ ಮಕ್ಕಳಿಗೆ ಹಾಗೂ ನೆರೆದಿದ್ದ ಎಲ್ಲರಿಗೂ ಉಪಹಾರ ಹಾಗೂ ಸಿಹಿತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರಮೀಳಾ ಆಗಮಿಸಿದ್ದ ಎಲ್ಲರನ್ನು ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಸುನೀತಾ ನಾಯಕ್ ದಿಕ್ಸೂಚಿ ಭಾಷಣವನ್ನು ಮಾಡಿದರು. ಸಹಶಿಕ್ಷ ಕಿ ಶ್ರೀಮತಿ ಅಶ್ವಿನಿ ಬಹುಮಾನದ ಪಟ್ಟಿ ವಾಚಿಸಿದರು. ಶಿಕ್ಷಕಿಯರಾದ ರಾದ ಕುಮಾರಿ ಸೌಮ್ಯವಂದನಾರ್ಪಣೆಗೈದರು. ಕುಮಾರಿ ಸುಪ್ರೀತಾ ಕಾರ್ಯಕ್ರಮವನ್ನು ನಿರೂಪಿಸಿದರು .