
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಜನರು ಭಾಗವಹಿಸಲು ಒತ್ತಾಯ ಇಲ್ಲ. ಸಮೀಕ್ಷೆಯಲ್ಲಿ ಭಾಗವಹಿಸುವುದು ಕುಟುಂಬ ಮತ್ತು ಜನರ ಸ್ವಇಚ್ಛೆಗೆ ಬಿಟ್ಟಿದ್ದು ಎಂದು ಪ್ರಕಟಣೆ ಮೂಲಕ ತಿಳಿಸಿದೆ.
ಒತ್ತಾಯವಾಗಿ ಸಮೀಕ್ಷೆಗೆ ಮಾಹಿತಿ ನೀಡಬೇಕು ಎಂದೇನಿಲ್ಲ. ಸಾರ್ವಜನಿಕರು ಸಮೀಕ್ಷೆಗೆ ಮಾಹಿತಿಯನ್ನ ಸ್ವಇಚ್ಛೆಯಿಂದ ನೀಡಬಹುದು ಅಥವಾ ನೀಡದೇನು ಇರಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.






















































