ಮಕ್ಕಳಿಗೆ ಆಸಕ್ತಿಗೆ, ಅನುಕೂಲಕರವಾದ ಕಲಿಕಾ ವಾತಾವರಣವನ್ನು ಮೂಡಿಸುವುದು ಅತ್ಯಗತ್ಯ: ಬೋಳ ಪ್ರಶಾಂತ್ ಕಾಮತ್

ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ ಜ.13 ರಂದು ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಮಕರ ಸಂಕ್ರಾಂತಿ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ “ಕಾರ್ಕಳ ಟೈಗರ್ಸ್” ಅಭಿಮಾನಿ ಬಳಗದ ಸಂಘಟಕರಾದ ಬೋಳ ಪ್ರಶಾಂತ್ ಕಾಮತ್ ಇವರು ಆಗಮಿಸಿ, ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಚಾಲನೆಯನ್ನು ನೀಡಿ “ಕಲಿಕೆ ಅಂಕಗಳಿಗೆ ಮಾತ್ರ ಸೀಮಿತವಾಗಿರದೆ,ಮಕ್ಕಳ ಆಸಕ್ತಿಗೆ ಅನುಕೂಲಕರವಾದ ಕಲಿಕಾ ವಾತಾವರಣವನ್ನು ಮೂಡಿಸುವುದು ಅತ್ಯಗತ್ಯ ಎಂದು ಮಾಹಿತಿ ನೀಡಿ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಗೋಪೂಜೆಯನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ ಆರ್ ಕಾಮತ್ ನಡೆಸಿಕೊಟ್ಟರು .ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ಬೋಳ ಪ್ರಶಾಂತ್ ಕಾಮತ್, ಶಾಲಾ ಅಧ್ಯಕ್ಷರಾದ ಶ್ರೀಯುತ ಡಾ.ಪ್ರಶಾಂತ್ ಹೆಗ್ಡೆ ಭಾಗವಹಿಸಿ ನೆರವೇರಿಸಿಕೊಟ್ಟರು. ತದನಂತರ ಪ್ರಾಂಶುಪಾಲರು ಸಂಕ್ರಾಂತಿಯ ಪೊಂಗಲ್ ತಯಾರಿಕೆಗೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು. ಜೊತೆಗೆ ಮಕ್ಕಳಿಂದ ಗಾಳಿಪಟ ಸಂಭ್ರಮಾಚರಣೆ ನಡೆಯಿತು. ವಿದ್ಯಾರ್ಥಿಗಳಿಂದ ಭಜನಾ ಕುಣಿತ,ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಶ್ರೀಯುತ ಡಾ.ಪ್ರಶಾಂತ್ ಹೆಗ್ಡೆ, ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ ಆರ್ ಕಾಮತ್,ಉಪಪ್ರಾಂಶುಪಾಲ ರಾದ ಶ್ರೀಮತಿ ಸುಜಾತ ಕೆ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ಸ್ವಾಗತಿಸಿ, ಶ್ರುತಿ ನಾಯಕ್ ವಂದಿಸಿ, 8ನೇ ತರಗತಿ ವಿದ್ಯಾರ್ಥಿ ತೇಜಸ್ ವಿ . ಶೇರಿಗಾರ್ ನಿರೂಪಿಸಿದರು.



















