
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಆ. 28 ರಂದು ಶ್ರೀ ಗಣೇಶ ಚತುರ್ಥಿ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿಘ್ನ ನಿವಾರಕನಾದ ಗಣೇಶನ ಶ್ಲೋಕಗಳನ್ನು ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಪ್ರಯುಕ್ತ ಸಂಸ್ಥೆಯ ಬಾಲಮಂದಿರದಿಂದ ಪೂರ್ವಪ್ರಾಥಮಿಕ ತರಗತಿಯ ಪುಟಾಣಿಗಳು ಕಾರ್ಕಳದ ಶ್ರೀ ನಾರಾಯಣ ಸಭಾಭವನಕ್ಕೆ ಭೇಟಿ ನೀಡಿ ಗಣೇಶನ ಮೂರ್ತಿ ತಯಾರಿಯ ಪ್ರಾತ್ಯಕ್ಷತೆಯನ್ನು ವೀಕ್ಷಿಸಿದರು .
ಕಾರ್ಯಕ್ರಮದ ಅಂಗವಾಗಿ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳು ಬಣ್ಣದ ಹಾಳೆಗಳಿಂದ ಪರಿಸರ ಸ್ನೇಹಿ ಗಣೇಶನ ವಿವಿಧ ಕಲಾಕೃತಿಗಳನ್ನು ತಯಾರಿಸಿದರು ಅದೇ ರೀತಿ ಪ್ರೌಢಶಾಲಾ ವಿದ್ಯಾರ್ಥಿಗಳು ಚುಕ್ಕಿಗಳ ಮೂಲಕ ಗಣೇಶನ ಚಿತ್ರವನ್ನು ಬಿಡಿಸಿ ಅದರ ಮಹತ್ವವನ್ನು ತಿಳಿಸಿದರು . ಶಾಲೆಯ 10ನೇ ತರಗತಿಯ ವಿದ್ಯಾರ್ಥಿ_ ವಿದ್ಯಾರ್ಥಿನಿಯರು ಸಂಸ್ಥೆಯ ಎಲ್ಲಾ ವಿಭಾಗಗಳ ಮಕ್ಕಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು .ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದರು.