
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 11/06/2025 ರಂದು ವಿದ್ಯಾರಂಭದ ಪ್ರಯುಕ್ತ ಗಣಹೋಮ ಕಾರ್ಯಕ್ರಮ, ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮವನ್ನು ಅರ್ಚಕರಾದ ಶ್ರೀಯುತ ದಿನೇಶ್ ಭಟ್ ಇವರು ನಡೆಸಿಕೊಟ್ಟರು.ಈ ಕಾರ್ಯಕ್ರಮವು ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ದಿನೇಶ್ ಕಾಮತ್ ದಂಪತಿಗಳ ನೇತೃತ್ವದಲ್ಲಿ ನಡೆಯಿತು. ವಿಧಿವತ್ತಾಗಿ ನಡೆದ ಈ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಶ್ರೀಯುತ ದಿನೇಶ್ ಭಟ್ ಇವರು “ಮಕ್ಕಳ ಸರ್ವತೋಮುಖ ಅಭಿವೃದ್ಧಿಯು ಗುರು ಹಿರಿಯರ ಆಶೀರ್ವಾದ, ದೇವರ ಅನುಗ್ರಹ, ಅಧ್ಯಾಪಕ ಹಾಗೂ ಪೋಷಕರ ಪರಿಶ್ರಮದಿಂದ ಪೂರ್ಣಗೊಳ್ಳುವುದು ಹಾಗೂ ಮಕ್ಕಳನ್ನು ಮುಂಜಾನೆ ಸಮಯದಲ್ಲಿ ಓದಿಸುವ ವಾಡಿಕೆಯನ್ನು ಆರಂಭಿಸಿ ಎಂದು ಮಾರ್ಗದರ್ಶನವನ್ನು ನೀಡಿದರು”. ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ_ ವಿದ್ಯಾರ್ಥಿನಿಯರು ಸತ್ಸಂಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆತ್ತವರ ಪ್ರೋತ್ಸಾಹವು ಅಭಿನಂದನೀಯ. ಈ ದಿನ ನಡೆದ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಹೆತ್ತವರು ಪಾಲ್ಗೊಂಡು ಕಾರ್ಯಕ್ರಮವನ್ನು ಅಂದಗಾಣಿಸಿಕೊಟ್ಟರು.



















