CBSE ಶಾಲೆಯಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ಎರಡು ದಿನಗಳ ಕಾರ್ಯಗಾರ

ಕಾರ್ಕಳ : ಇಲ್ಲಿನ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆಯಲ್ಲಿ Strengthening Assessment-and Evaluation ವಿಷಯದ ಕುರಿತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ CBSE ಶಾಲೆಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ಎರಡು ದಿನಗಳ ಕಾರ್ಯಗಾರ ನಡೆಯಿತು. ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರು ಹಾಗೂ ಶ್ರೀ ಭುವನೇಂದ್ರ ಕಾಲೇಜು ಟ್ರಸ್ಟ್ ನ ಕಾರ್ಯದರ್ಶಿ ಡಾ. ಮಂಜುನಾಥ್ ಎ ಕೋಟ್ಯಾನ್ ಮಾತನಾಡಿ ಶಿಕ್ಷಕರು ತಮ್ಮನ್ನು ಆಧುನಿಕ ಯುಗದ ಶೈಕ್ಷಣಿಕ ಅಗತ್ಯತೆಯ ಅನುಸಾರವಾಗಿ AI, chatgpt ಮುಂತಾದ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಇಂತಹ ಕಾರ್ಯಗಾರಗಳು ಕೌಶಲಯುಕ್ತ ಶಿಕ್ಷಕರನ್ನು ರೂಪಿಸುವುದರ ಜೊತೆ ಜೊತೆಗೆ ಸದೃಢ ಸಮಾಜವನ್ನು ರೂಪಿಸಲು ಸಹಕರಿಸುತ್ತವೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ಶ್ರೀ ಕೆ ವೆಂಕಟೇಶ್ ಪ್ರಭುರವರು ಮಾತನಾಡಿ, ಸರಳ, ನಿಷ್ಠಾವಂತ ಹಾಗೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಶಿಕ್ಷಕ ಸಮಾಜದ ನಿಜವಾದ ಆಸ್ತಿ ಎಂದರು. ಎರಡು ದಿನಗಳ ಶಿಕ್ಷಕರ ಕಾರ್ಯಾಗಾರಕ್ಕೆ ಶುಭ ಹಾರೈಸಿದರು.

ಕಾರ್ಯಾಗಾರದಲ್ಲಿ ವಿವಿಧ CBSE ಶಾಲೆಗಳ 60 ಶಿಕ್ಷಕರು ಭಾಗವಹಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ SMS ಇಂಗ್ಲಿಷ್ ಮೀಡಿಯಂ ಶಾಲೆ, ಬ್ರಹ್ಮಾವರದ ಪ್ರಿನ್ಸಿಪಾಲ್ ಶ್ರೀಮತಿ ಅಭಿಲಾಷಾ ಹಾಗೂ SSRVM, ಮಂಗಳೂರು ಪ್ರಿನ್ಸಿಪಾಲ್ ಶ್ರೀ ಸುರೇಶ್ ಮಹಾಲಿಂಗಪುರ ಅವರು ಉಪಸ್ಥಿತರಿದ್ದರು.

ಶಾಲೆಯ ಪ್ರಿನ್ಸಿಪಾಲ್ ಶ್ರೀಮತಿ ಪ್ರಮೀಳಾ ಕೋಟ್ಯಾನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿಯರಾದ ಆರತಿ ಆಚಾರ್ ಕಾರ್ಯಕ್ರಮ ನಿರ್ವಹಿಸಿ, ಬಬಿತಾ ಶ್ರೀಯಾನ್ ವಂದಿಸಿದರು.
ಈ ಕಾರ್ಯಾಗಾರ ಶಿಕ್ಷಕರಿಗೆ ನೂತನ ಮೌಲ್ಯಮಾಪನ ತಂತ್ರಗಳನ್ನು ಕಲಿಸಲು ಮತ್ತು ತಾಂತ್ರಿಕ ಪ್ರಗತಿಯನ್ನು ಅಳವಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿತ್ತು.
