
ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ರಕ್ಷಾಬಂಧನ ಹಬ್ಬವನ್ನು ಪ್ರೌಢಶಾಲೆ ಹಾಗೂ ಪ್ರಾಥಮಿಕ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಆಚರಿಸಲಾಯಿತು. ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಆರತಿಯನ್ನು ಬೆಳಗಿ ಸಿಹಿ ತಿನ್ನಿಸಿ ರಕ್ಷೆಯನ್ನು ಕಟ್ಟುವುದರ ಮೂಲಕ ಸಹೋದರತೆಯ ಬಾಂಧವ್ಯವನ್ನು ಪಸರಿಸಿದರು.

ಸಂಸ್ಥೆಯ ಪ್ರಾಂಶುಪಾಲೆ ಪ್ರಮೀಳಾ ಕೋಟ್ಯಾನ್ ರಕ್ಷಾಬಂಧನದ ಸಂದೇಶವನ್ನು ನೀಡಿದರು. ಕನ್ನಡ ಶಿಕ್ಷಕ ಹರಿಶ್ಚಂದ್ರ ಇವರು ರಕ್ಷಾಬಂಧನದ ಹಿನ್ನೆಲೆ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲಾ ಸಂಚಾಲಕರಾದ ಕೆ. ವೆಂಕಟೇಶ್ ಪ್ರಭುರವರು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಹತ್ತನೆಯ ತರಗತಿಯ ವಿದ್ಯಾರ್ಥಿನಿ ಕುಮಾರಿ ಸ್ನಿಗ್ಧ ಇವರು ನಿರೂಪಿಸಿದರು.

