
ದಿನಾಂಕ 26.07.2025ನೇ ಶನಿವಾರದಂದು ಶ್ರೀ ಭುವನೇಂದ್ರ ಕಾಲೇಜಿನ ಶ್ರೀ ರಾಮಕೃಷ್ಣ ಸಭಾಂಗಣದಲ್ಲಿ 25ನೇ ವರ್ಷದ ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರ ನಡೆಯಲಿದೆ.
ಬೆಳಗ್ಗೆ 9:15ಕ್ಕೆ ಪೊಳಲಿಯ ಶ್ರೀ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ವಿವೇಕ ಚೈತನ್ಯಾನಂದಾಜೀ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ ಅನುಗ್ರಹ ಸಂದೇಶ ನೀಡಲಿದ್ದು ಬಳಿಕ 10:00 ರಿಂದ 11 ರವರೆಗೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ವಿನಾಯಕ ಭಟ್ಟ, ಗಾಳಿಮನೆ ಅವರಿಂದ “ವೇದ ಮತ್ತು ರಾಷ್ಟ್ರೀಯತೆ”ಯ ವಿಚಾರಗೋಷ್ಠಿ ನಡೆಯಲಿದೆ.
11:15 ರಿಂದ 12:20ರವರೆಗೆ ಎಂ.ಎಸ್.ಸಿ.ಇ ಮಾಹೆ ಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸತೀಶ್ ಕುಮಾರ್ ಅವರಿಂದ “ಆಧ್ಯಾತ್ಮಿಕತೆ ಮತ್ತು ವ್ಯಕ್ತಿತ್ವ ವಿಕಸನ”ದ ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ಕೋಟ್ಯಾನ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಎಂ ಕೆ ವಿಪುಲ್ ತೇಜ್, ಸಂಚಾಲಕರದ ಶ್ರೀ ಕೆ ವೆಂಕಟೇಶ ಪ್ರಭು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆಹ್ವಾನಿಸಿದ್ದಾರೆ.





