
ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಇದರ ಐಕ್ಯೂಎಸಿ ಹಾಗೂ ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿ ಮತ್ತು ಕಾಲೇಜಿನ ರೋಟರಾಕ್ಟ್ ಕ್ಲಬ್ ಆಶ್ರಯದಲ್ಲಿ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿಯ ಸಲುವಾಗಿ ಕೌಶಲ್ಯಾಭಿವೃಧ್ಧಿ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮ ನೆರವೇರಿತು.
ಜಿಲ್ಲಾ ಗವರ್ನರ್ ಆಗಿರುವ ರೊಟೇರಿಯನ್ ಪಿ. ಹೆಚ್. ಎಫ್. ಕೆ.ಫಾಲಾಕ್ಷ ಇವರು ಮಾತನಾಡುತ್ತಾ, ರೋಟರಿಯ ಯಂಗ್ ಟೀಮ್ ರೋಟರಾಕ್ಟರ್ ಆಗಿದೆ. ಯುವಕರು ಸಮಾಜ ಸೇವೆಯಲ್ಲಿ ಭಾಗವಹಿಸಬೇಕೆನ್ನುವುದು ರೋಟರಿ ಕ್ಲಬ್ ಇದರ ಉದ್ದೇಶವಾಗಿದೆ. ನಾಯಕತ್ವ ತರಬೇತಿ, ನಾಯಕತ್ವ
ಗುಣಗಳ ಬಗ್ಗೆ ಕಾಲೇಜಿನ ಪಠ್ಯಗಳಲ್ಲಿ ಹೇಳಿಕೊಡದೇ ಇದ್ದದ್ದನ್ನು ಹಲವಾರು ಸಂಘ ಸಂಸ್ಥೆಗಳು, ರೋಟರ್ಯಾಕ್ಟ್ ಕ್ಲಬ್ ಗಳಂತಹ ಸಮಾಜಮುಖೀ ನಿಲುವನ್ನು ಹೊಂದಿರುವ ಯುವಕರ ತಂಡ ತಮ್ಮದೇ ಆದ ಕಾರ್ಯವೈಖರಿಯಿಂದ ಮಾಡುತ್ತವೆ. ಮಾಡಬೇಕಾದ ಕೆಲಸವನ್ನು ಶೃದ್ಧೆಯಿಂದ,ಜವಾಬ್ದಾಯಿಂದ ಇಂದಿನ ವಿದ್ಯಾರ್ಥಿಗಳು ಮಾಡಬೇಕು. ಸಮಾಜಸೇವೆಯಲ್ಲಿ ಭಾಗವಹಿಸಿ ಅದರ ಮುಖೇನ ಮತ್ತೆ ಸಮಾಜಕ್ಕೆ ಕೊಡುಗೆಯನ್ನು ವಾಪಾಸು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೋಟ್ಯಾನ್ ಅವರು, ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲೂ ಕ್ರಿಯೇಟಿವ್ ಥಿಂಕರ್ಸ್ ಗೆ ಯಾವತ್ತೂ ಅವಕಾಶಗಳ ಕೊರತೆಗಳು ಬರುವುದಿಲ್ಲ. ಆದರೆ ಎಲ್ಲ ಕ್ಷೇತ್ರಗಳಲ್ಲೂ ಇವತ್ತು
ಪೈಪೋಟಿ ಕೊಟ್ಟರೂ ಗೆಲ್ಲಲಾರದಷ್ಟು ಕಠಿಣ ಸ್ಪರ್ಧೆ ಇದೆ. ಏನೇ ಇದ್ದರೂ ತನ್ನನ್ನು ಬೆಳೆಸಿಕೊಳ್ಳಲು, ಬದುಕಲು ಕಲಿಯಲು ಅರಿತವರಿಗೆ ಈ ಸ್ಪರ್ಧೆಗಳು ಸವಾಲಲ್ಲ. ಅಂತಹ ಗಟ್ಟಿತನ ಬರುವುದೇ ರೋಟರಿ ಕ್ಲಬ್ ನಂತಹ ಸಂಸ್ಥೆಗಳಿಂದ. ವಿದ್ಯಾರ್ಥಿಗಳು ಸಾಧ್ಯ ಆದಷ್ಟು ವ್ಯಕ್ತಿತ್ವ ವಿಕಸನವನ್ನು ಬೆಳೆಸಿಕೊಳ್ಳುವುದು ಅಗತ್ಯವೇ ಆಗಿದೆ. ಇಂತಹ ಕಾರ್ಯಕ್ರಮಗಳು ನಮ್ಮ ವಿದ್ಯಾರ್ಥಿಗಳ ಭವಿಷ್ಯಕ್ಕೆ ನಿಜವಾದ ಅರ್ಥದಲ್ಲಿ ದಾರಿಯಾಗಲಿದೆ ಎಂದರು. ಸಭಾ ಕಾರ್ಯಕ್ರಮದ ಬಳಿಕ, ಕಾರ್ಕಳ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮುರಳೀಧರ ನಾಯಕ್ ಇವರು ರಸ್ತೆ ಸುರಕ್ಷತೆಯ ಕುರಿತು ಮತ್ತು ಫೋಕ್ಸೋ ಕಾಯಿದೆಯ ಕುರಿತು ವಿದ್ಯಾರ್ಥಿಗಳಿಗೆ ವಿಸ್ತಾರ ಮಾಹಿತಿ ನೀಡಿದರು. ವೇದಿಕೆಯಲ್ಲಿ ರೋಟರಿ ಜಿಲ್ಲಾ ಪ್ರಥಮ ಮಹಿಳೆ ಶ್ರೀಮತಿ ರೇಖಾ ಫಾಲಾಕ್ಷ, ಅಸಿಸ್ಟೆಂಟ್ ಗವರ್ನರ್ ವಿಘ್ನೇಶ್ ಶೆಣೈ, ಸುಧಾಕರ್ ಎಂ. ಪೂಜಾರಿ, ಕಾಲೇಜಿನ ರೋಟರಿ ಕ್ಲಬ್ ನ ಸಂಯೋಜಕರಾದ ರಾಮದಾಸ ಶೆಟ್ಟಿ , ರೋಟರಾಕ್ಟರ್ ರಕ್ಷಣ್, ಉಪಸ್ಥಿತರಿದ್ದರು.
ರೊಟೇರಿಯನ್ ಸುರೇಂದ್ರ ನಾಯಕ್ ಸ್ವಾಗತಿಸಿದರು. ರೋಟರಾಕ್ಟರ್ ಸಾಕ್ಷಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೋಟರ್ಯಾಕ್ಟರ್ ಮರಿಯಮ್ ಧನ್ಯವಾದ ಸಮರ್ಪಿಸಿದರು.






















































