
ಶ್ರೀ ಪದ್ಮಾಂಬ ಅನುದಾನಿತ ಹಿರಿಯ ಪ್ರಾರ್ಥಮಿಕ ಶಾಲೆ ವರಂಗ ಇಲ್ಲಿ ಮಕ್ಕಳ ಸುರಕ್ಷತೆ ಹಾಗೂ ಕಾನೂನು ಮಾಹಿತಿ ಕಾರ್ಯಕ್ರಮ ದಿನಾಂಕ 28/02/2025 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ರತ್ನಾಕರ್ ಅರಿಗರವರು ವಹಿಸಿದರು.ವರಂಗದ ಹಳೆ ವಿದ್ಯಾರ್ಥಿ ವಕೀಲರಾದ ವಿ. ಸುರೇಶ್ ಪೂಜಾರಿಯವರು ಮಕ್ಕಳ ಸುರಕ್ಷತೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಸಹ ಶಿಕ್ಷಕಿಯರಾದ ಸುಜಾತರವರು ಸ್ವಾಗತಿಸಿ ಪ್ರಮೀಳಾರವರು ಧನ್ಯವಾದವಿತ್ತರು. ಜಯಂತಿಯವರು ಕಾರ್ಯಕ್ರಮ ನಿರೂಪಿಸಿದರು










