ಕನಕ ಜಯಂತಿ ಹಾಗೂ ರಾಷ್ಟ್ರ ಗಣ ವಂದೇ ಮಾತರಂ ವಿಶೇಷ ಕಾರ್ಯಕ್ರಮ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ ನ. 8ರಂದು ಕನಕ ಜಯಂತಿ ಹಾಗೂ ರಾಷ್ಟ್ರ ಗಾನ “ವಂದೇ ಮಾತರಂ” ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಸಹ ಶಿಕ್ಷಕಿ ಗೀತಾ ಭಂಡಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಹ ಶಿಕ್ಷಕಿ ವಿದ್ಯಾ ಶಶಿಧರ್ ಭಟ್ ರವರು ಕನಕದಾಸರ ಜೀವನ ಚರಿತ್ರೆಯನ್ನು ಮಕ್ಕಳಿಗೆ ವಿವರಿಸಿದರು. ಎಲ್ಲಾ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಸೇರಿ ಕನಕದಾಸರ ಗೀತೆಯನ್ನು ಹಾಡಿದರು. ಅದೇ ರೀತಿ ಎಲ್ಲರೂ ಸೇರಿ ಬಂಕಿಮ್ ಚಂದ್ರ ಚಟರ್ಜಿ ಯವರ “ವಂದೇ ಮಾತರಂ”ಗೀತೆಯನ್ನು ಹಾಡಲಾಯಿತು. ಕೊನೆಯಲ್ಲಿ ಸಹ ಶಿಕ್ಷಕ ಉಮೇಶ್ ರವರು ಧನ್ಯವಾದ ನೀಡಿದರು. ಸಹ ಶಿಕ್ಷಕಿ ಅನಿತಾ ರವರು ಎಲ್ಲರಿಗೂ ಸಿಹಿತಿಂಡಿಯ ವ್ಯವಸ್ಥೆ ಮಾಡಿದರು.









