26.6 C
Udupi
Wednesday, April 22, 2026
spot_img
spot_img
HomeBlogಶ್ರೀ ಜಲದುರ್ಗಾ ಭಜನಾ ಮಂಡಳಿಯ ನೇತೃತ್ವದಲ್ಲಿ ತೆಳ್ಳಾರಿನಲ್ಲಿ ದ್ವೀತಿಯ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ

ಶ್ರೀ ಜಲದುರ್ಗಾ ಭಜನಾ ಮಂಡಳಿಯ ನೇತೃತ್ವದಲ್ಲಿ ತೆಳ್ಳಾರಿನಲ್ಲಿ ದ್ವೀತಿಯ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ

ತೆಳ್ಳಾರು ಶ್ರೀ ಜಲದುರ್ಗಾ ದೇವಿಯ ದಿವ್ಯ ಸನ್ನಿಧಿಯಲ್ಲಿ ದ್ವಿತೀಯ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಇಂದು ವಿಜೃಂಭಣೆಯಿಂದ ಜರಗಿತು.ಶ್ರೀ ಜಲದುರ್ಗಾ ಭಜನಾ ಮಂಡಳಿಯ ನೇತೃತ್ವದಲ್ಲಿ ಅರ್ಚಕ ಶ್ರೀ ಜಾನಕೀನಾಥ ಶಿಬರೂರಾಯ, ಕಾರ್ಕಳ ಇವರ ಪೌರೋಹಿತ್ಯದಲ್ಲಿ ಪೂರ್ವಾಹ್ನ ಗಂಟೆ 10-00 ರಿಂದ ಆರಂಭವಾದ ಪೂಜೆಯಲ್ಲಿ ನೂರಾರು ಜನ ಮುತ್ತೈದೆಯರು ಶೃದ್ಧಾ ಭಕ್ತಿಯೊಂದಿಗೆ ವೃತಧಾರಿಗಳಾಗಿ ಭಾಗವಹಿಸಿದ್ದರು.

ಪೂಜೆಯ ನಂತರ ವೃತಧಾರಿಗಳಿಂದ ಸಾಮೂಹಿಕ ಭಜನೆ ಬಳಿಕ ಮಹಾಲಕ್ಷ್ಮಿ ದೇವಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಪೂಜೆ ಸಂಪನ್ನಗೊಂಡಿತ್ತು.ಏಕಾದಶಿ ಪ್ರಯುಕ್ತ ವೃತಧಾರಿಗಳೊಂದಿಗೆ ಆಗಮಿಸಿದ್ದ ಭಕ್ತಾದಿಗಳಿಗೆ ಸೊಗಸಾದ ಉಪಾಹಾರದ ವ್ಯವಸ್ಥೆಯನ್ನು ಭಜನಾ ಮಂಡಳಿಯು ಕಲ್ಪಿಸಿತ್ತು. ಭಜನಾ ಮಂಡಳಿಯ ಜೊತೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು, ಊರ ಭಕ್ತಾದಿಗಳು ಬೆರೆತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು. ಯಶಸ್ವಿಯಾಗಿ ಪೂಜಾ ಕಾರ್ಯವನ್ನು ನಡೆಸುವಲ್ಲಿ ಸಹಕರಿಸಿದ ಸರ್ವರಿಗೂ ಜಲದುರ್ಗಾ ಭಜನಾ ಮಂಡಳಿಯವರು ಹೃತ್ಪೂರ್ವಕವಾಗಿ ಧನ್ಯವಾದ ಸಮರ್ಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page