77ನೇ ಗಣರಾಜ್ಯೋತ್ಸವ ಆಚರಣೆ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ
77ನೇ ಗಣರಾಜ್ಯೋತ್ಸವದ ಆಚರಣೆ ,ಬೆಳಗ್ಗೆ 9:30ಗೆ ಸರಿಯಾಗಿ ಶ್ರೀ ಲಕ್ಷ್ಮಣ್ ಶೆಣೈ ಕಾರ್ಕಳ ಇವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದ್ದು ತದನಂತರ ಮಕ್ಕಳಿಂದ ಸಾಮೂಹಿಕ ಕವಾಯಿತು ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ,ಶ್ರೀ ರಾಮ ಸೇರಿಗಾರ್ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ವಾದಿರಾಜ ಭಟ್ ಮುಡ್ರಾಲು , ಶ್ರೀ ರವಿಶಂಕರ್ ಸೇರಿಗಾರ್,ಹಾಗೂ ದಾನಿಗಳಾಗಿರುವ ಶ್ರೀ ಲಕ್ಷ್ಮಣ್ ಶೆಣೈ ಕಾರ್ಕಳ , ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪೂರ್ಣಿಮಾ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತದ ಪ್ರಜೆಗಳಾಗಿ ನ್ಯಾಯ, ಧರ್ಮ ,ಭ್ರಾತೃತ್ವ , ಸಮಾನತೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಮುಖ್ಯ ಅತಿಥಿಗಳಾಗಿರುವ ಹಾಗೂ ದಾನಿಗಳಾಗಿರುವ ಶ್ರೀ ವಾದಿರಾಜ ಭಟ್ ಇವರು ನೀಡಿದರು.
ಮಕ್ಕಳಿಗಾಗಿ ಆಸ್ತಿಯನ್ನು ಮಾಡಬಾರದು, “ಮಕ್ಕಳನ್ನೇ ನಮ್ಮ ದೇಶದ ಆಸ್ತಿಗಳಾಗಿ ಮಾಡಬೇಕು”ಎಂದು ಹೇಳುತ್ತಾ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ದಾನಿಗಳಾಗಿರುವ ಶ್ರೀ ರವಿಶಂಕರ್ ಸೇರಿಗಾರ್ ಶುಭಾಶಯ ನೀಡಿದರು.
ಮಕ್ಕಳು ದೇಶಭಕ್ತಿ ಗೀತೆ ಹಾಗೂ ಗಣರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದರು.
ವೇದಿಕೆಯಲ್ಲಿರುವ ಎಲ್ಲಾ ಅತಿಥಿಗಳು ಸಂವಿಧಾನದ ಮಹತ್ವದ ಬಗ್ಗೆ ಸಂದೇಶವನ್ನು ಮಕ್ಕಳಿಗೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪೂರ್ಣಿಮಾ ಶೆಣೈ ರವರು ಸ್ವಾಗತ ದೊಂದಿಗೆ ದಾನಿಗಳ ಪರಿಚಯವನ್ನು ಮಾಡಿದರು. ವೇದಿಕೆಯಲ್ಲಿರುವ ಎಲ್ಲಾ ಅತಿಥಿ ಯವರಿಗೆ ಶಾಲು ಹೊಂದಿಸಿ ಸ್ಮರಣೆಯನ್ನು ನೀಡಲಾಯಿತು.
ಶಾಲಾ ಸಹ ಶಿಕ್ಷಕಿ ಶ್ರೀಮತಿ ಶುಭಾ ರವರು ಕಾರ್ಯಕ್ರಮವನ್ನು ನಿರೂಪಿಸಿ ,ಶ್ರೀಮತಿ ವಸಂತಿ ಇವರು ಧನ್ಯವಾದ ನೀಡಿದರು.
ಈ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಸದಸ್ಯರು, ಪೋಷಕರು ,ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.



















