
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ದಿನಾಂಕ 21-06-2025 ನೇ ಶನಿವಾರದಂದು ಉಚಿತ ನೋಟ್ ಪುಸ್ತಕ ಮತ್ತು ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮವು ನೆರವೇರಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ, ಅತಿಥಿಗಳಾಗಿ ಶಾಲಾ ಸಂಚಾಲಕರಾದ ಶ್ರೀ ಸುಧಾಕರ ಡೋಂಗ್ರೆ , ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ, ದಾನಿಗಳಾದ ರಘುರಾಮ್ ಶೆಟ್ಟಿ, ಯುವ ನ್ಯಾಯವಾದಿಗಳಾದ ಕೆ ವಿನೀತ್ ಕುಮಾರ್, ಸಮಾಜ ಸೇವಕರಾದ ರಜತ್ ರಾಮ್ ಮೋಹನ್, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಾಲಿ ಬಾಯ್ಸ್ ಬಜಗೋಳಿ ಇವರಿಂದ ಮತ್ತು ವಿಜಯ ರಾಘವ ಮರಾಠೆ ಇವರಿಂದ ಕೊಡಲ್ಪಡುವ ಉಚಿತ ನೋಟ್ ಪುಸ್ತಕಗಳ ವಿತರಣೆ, ರವಿ ಮರಾಠೆ ಇವರಿಂದ ಕೊಡಲ್ಪಡುವ ಸಮವಸ್ತ್ರ ವಿತರಣೆ, ಹಾಗೆಯೇ ಶಿಪ್ಸಿ ಸ್ಮರಣಾರ್ಥ ವಿ ಎಂ .ಮೈಕಲ್ ಇವರಿಂದ ಮತ್ತು ವಾದುದೇವ ನಾಯಕ್ ಇವರಿಂದ ಕೊಡಲ್ಪಡುವ ಲೇಖನ ಸಾಮಗ್ರಿಗಳು ಮತ್ತು ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮವು ನಡೆಯಿತು.ಕಾರ್ಯಕ್ರಮದಲ್ಲಿ ದಾನಿಗಳು ಮತ್ತು ಪ್ರಾಯೋಜಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರು, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಹಳೆ ವಿದ್ಯಾರ್ಥಿಗಳು , ಪೋಷಕ ವೃಂದದವರು, ಶಿಕ್ಷಕ ವೃಂದದವರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಸುನೀತಾ ನೆರವೇರಿಸಿದರು. ಶೋಭಾ ಇವರು ಎಲ್ಲರನ್ನು ಸ್ವಾಗತಿಸಿ, ಜ್ಯೋತಿ ಇವರು ವಂದನಾರ್ಪಣೆಗೈದರು.