ಸಾಣೂರು ಪ್ರೌಢಶಾಲಾ ವಿಭಾಗಕ್ಕೆ, ಪರಿಕರಗಳ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ 10 ಬೆಂಚ್ ಮತ್ತು 10 ಡೆಸ್ಕ್ ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗಕ್ಕೆ ಮಂಜೂರಾಗಿದ್ದು ಜು 7 ರಂದು ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಹಸ್ತಾಂತರ ಮಾಡಲಾಯಿತು.
ಈ ಸಂಧರ್ಭದಲ್ಲಿ ಪ್ರೌಢ ಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಲವೀನಾ ಮೆಲ್ವಿಟಾ ನೋರೋನ್ಹ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು,, ವಿಜ್ಞಾನ ಶಿಕ್ಷಕರಾದ ಅನಿತಾ ರೀಟಾ ರೋಜಾರಿಯೋ , ಆಂಗ್ಲ ಭಾಷಾ ಶಿಕ್ಷಕಿ ಪೂರ್ಣಿಮಾ ಪ್ರಭು ಉಪಸ್ಥಿತರಿದ್ದರು.