26.8 C
Udupi
Monday, April 13, 2026
spot_img
spot_img
HomeBlogಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ಬೈಲೂರು ವಲಯ ಜಾರ್ಕಳಸಿರಿ ಜ್ಞಾನ ವಿಕಾಸ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ಬೈಲೂರು ವಲಯ ಜಾರ್ಕಳಸಿರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ಬೈಲೂರು ವಲಯ ಜಾರ್ಕಾಳ ಸಿರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಹಿರಿಯ ಸದಸ್ಯರಾದ ಕಮಲಾಕ್ಷ ನಾಯಕ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಸದಾನಂದ ಸಾಲಿಯಾನ್ ರವರು ಊರಲ್ಲಿ ಗ್ರಾಮಾಭಿವೃದ್ದಿ ಬರುವ ಮೊದಲು ಇದ್ದ ಹಂಚಿನ ಮನೆ ಎಲ್ಲಾ ಇಂದು ಟೆರೆಸ್ ಮನೆಗಳಗಿವೆ. ಮನೆಯಿಂದ ಹೊರ ಬರದ ಮಹಿಳೆ ಇಂದು ನಾನಾ ಉತ್ತಮ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವುದು ಕಂಡಾಗ ಯೋಜನೆ ನಮಗೇನು ಕೊಟ್ಟಿದೆ ಎನ್ನುವುದು ತಿಳಿದಿದೆ. ಯೋಜನೆ ಅತೀ ಸುಲಭ ವಿಧಾನ ದ ಮೂಲಕ ಅಭಿವೃದ್ಧಿಗೆ ಸಾಲ ನೀಡುವುದರ ಜೊತೆಗೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಅಂತಹ ಯೋಜನೆಯನ್ನು ನಮ್ಮೂರಿಗೆ ಕೊಟ್ಟಿರುವ ಪೂಜ್ಯರು ಹಾಗೂ ಮಾತೃಶ್ರೀ ಯವರಿಗೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಲೂರು ವಲಯ ಜಾರ್ಕಳ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ವಹಿಸಿದ್ದರು.


ಕೇಂದ್ರದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕೇಂದ್ರದ ಸದಸ್ಯರು ಹಾಗೂ ಸಿರಿ ಭಜನಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಮಮತಾ, ಸಂಯೋಜಕಿ ರೇಖಾ, ಪದಾಧಿಕಾರಿ ಅಶ್ವಿನಿ ಉಪಸ್ಥಿತಿ ಇದ್ದರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page