ಗಣೇಶ್ ಜಾಲ್ಸೂರು
ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು

ನಮಿಸುವೆನು ವಿನಾಯಕ
ಹರಸು ಅಭಯ ಪ್ರದಾಯಕ
ಇಂದು ಶುಭದ ಚೌತಿಯು
ತುಂಬಿದೆ ಸಂತಸ ಎಲ್ಲೆಲ್ಲಿಯೂ
ಶಿವ ಪಾರ್ವತಿಯರ ನಂದನ
ಕರಿಮುಖ ಶ್ರೀ ಗಜವದನಾ
ಮೊದಲ ಪೂಜೆಯು ನಿನಗೆ
ಶುಭವ ನೀಡು ನೀನೆಮಗೆ
ಹಣ್ಣುಕಾಯಿ ತುಪ್ಪ ದೀಪ
ಕರ್ಪೂರ ಪರಿಮಳದ ಧೂಪ
ಮಂಗಳಮಯ ಮೂರುತಿಯೇ
ಬೆಳಗುವೆನು ನಿನಗೆ ಆರತಿ
ನಿನ್ನದೇ ಪುಣ್ಯ ಲಿಖಿತ
ವ್ಯಾಸ ವಿರಚಿತ ಮಹಾಭಾರತ
ಬಾರೋ ಬೇಗ ಓ ವಿಘ್ನೇಶ
ಗಣಗಳ ಈಶ ಶ್ರೀ ಗಣೇಶ
