29.3 C
Udupi
Thursday, April 2, 2026
spot_img
spot_img
HomeBlogಶಾಲಾ ಅವಧಿ ಬದಲು ರಜೆ ವೇಳೆ ಶಿಕ್ಷಕರನ್ನು ಸರ್ವೆಗೆ ಬಳಸಿಕೊಳ್ಳುತ್ತಿದ್ದೇವೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಾಲಾ ಅವಧಿ ಬದಲು ರಜೆ ವೇಳೆ ಶಿಕ್ಷಕರನ್ನು ಸರ್ವೆಗೆ ಬಳಸಿಕೊಳ್ಳುತ್ತಿದ್ದೇವೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

spot_imgspot_img

ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ಕಾರ್ಯವನ್ನು ಶಿಕ್ಷಕ ವರ್ಗ ಉತ್ತಮವಾಗಿ ನಡೆಸಿಕೊಡಲಿದೆ. ಶಿಕ್ಷಕರ ವಿಚಾರದಲ್ಲಿ ಬಿಜೆಪಿ ಗೊಂದಲಗಳನ್ನು ಮೂಡಿಸುವ ಕೆಲಸ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಮೀಕ್ಷೆ ಮಾಡುವುದು ಅಗತ್ಯ. ವಿವಿಧ ಸಮುದಾಯಗಳ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ತಿಳಿದುಕೊಳ್ಳಬೇಕಾಗುತ್ತದೆ. ಶಿಕ್ಷಕರನ್ನು ಬಳಸದ ಹೊರತು ಬೇರೆ ಪರ್ಯಾಯ ವ್ಯವಸ್ಥೆ ಇಲ್ಲ. ಅದಕ್ಕಾಗಿಯೇ ಶಾಲಾ ಅವಧಿ ಬದಲು ರಜೆ ವೇಳೆ ಶಿಕ್ಷಕರನ್ನು ಸರ್ವೆಗೆ ಬಳಸಿಕೊಳ್ಳುತ್ತಿದ್ದೇವೆ.ಎಲ್ಲವೂ ಸರಿಯಿದೆ ಅಂದಾಗ ಬಿಜೆಪಿಯವ್ರು ಏನಾದ್ರೂ ಒಂದು ಹುಳಿ ಹಾಕಿಬಿಡುತ್ತಾರೆ. ಶಿಕ್ಷಕರಿಗೆ ಸಮೀಕ್ಷೆ ಚೆನ್ನಾಗಿ ಮಾಡಿಕೊಡಿ, ಸಹಕಾರ ಕೊಡಿ ಅಂತ ಮನವಿ ಮಾಡಿಕೊಂಡಿದ್ದೇವೆ. ಶಿಕ್ಷಕರು ಸಹ ಅವರ ಹಕ್ಕು ಎಂದು ಭಾವಿಸಿ ಸಮೀಕ್ಷೆ ಮಾಡಬೇಕು. ಹತ್ತು ಜನ ನಾವು ಸಮೀಕ್ಷೆ ಮಾಡಲ್ಲ ಅಂದರೆ ಅವರೇ ಅವರ ಹಕ್ಕು ಉಲ್ಲಂಘನೆ ಮಾಡಿದ ಹಾಗೆ. ಶಿಕ್ಷಕರಿಗೆ ಅಂತ ದಸರಾ ರಜೆ ಕೆಲ ದಿನ ವಿಸ್ತರಣೆ ಮಾಡುವುದು ಈ ಹಂತದಲ್ಲಿ ಕಷ್ಟ. ದಸರಾ ರಜೆ ವಿಸ್ತರಣೆ ಪ್ರಸ್ತಾಪ ಇಲ್ಲ. ದಸರಾ ರಜೆ ಮುಗಿಯುತ್ತಿದ್ದ ಹಾಗೆ ಶಾಲೆಗಳು ಆರಂಭ ಆಗುತ್ತವೆ ಎಂದು ವಿವರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page