
ಶಬರಿಮಲೆ: ಈಗಾಗಲೇ ಶಬರಿಮಲೆಗೆ ಮೊಬೈಲ್ ಫೋನ್ ತರುವುದಕ್ಕೆ ನಿಯಂತ್ರಣ ಹೇರಿದ್ದರೂ, ಸೋಪಾನದಲ್ಲಿ ಗರ್ಭಗುಡಿಯ ಮುಂದೆ ಭಕ್ತರು ಮೊಬೈಲ್ ಚಿತ್ರೀಕರಿಸುವುದನ್ನು ನಿಯಂತ್ರಿಸಬೇಕೆಂದು ಹೈಕೋರ್ಟ್ ಸೂಚಿಸಿದೆ.
ಜಸ್ಟೀಸ್ ಅನಿಲ್ ಕೆ. ನರೇಂದ್ರನ್ ಹಾಗೂ ಜಸ್ಟೀಸ್ ಎಸ್. ಮುರಳೀಕೃಷ್ಣ ಅವರನ್ನು ಒಳಗೊಂಡ ಪೀಠವು ಪೊಲೀಸರು ಹದಿನೆಂಟು ಮೆಟ್ಟಲಿನಲ್ಲಿ ಅಯ್ಯಪ್ಪನಿಗೆ ಬೆನ್ನು ಹಾಕಿ ನಿಂತು ಫೋಟೋ ತೆಗೆದಿರುವ ಬಗ್ಗೆ ವರದಿ ಕೇಳಿದ್ದು ಪೊಲೀಸರ ಸೇವೆ ಇಲ್ಲಿ ಸ್ತುತ್ಯಾರ್ಹವಾಗಿದ್ದರೂ, ಈ ರೀತಿಯಲ್ಲಿ ವ್ಯವಹರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.



















