
ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ
ಕಾರ್ಕಳ, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ಇಲ್ಲಿ ಆಯೋಜಿಸಿದ್ದ 17ರ
ವಯೋಮಿತಿಯೊಳಗಿನ ತಾಲೂಕು ಮಟ್ಟದ ಬಾಲಕ ಹಾಗೂ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್
ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಾಲಕರ
ವಿಭಾಗದಲ್ಲಿ 10ನೇ ತರಗತಿಯ ಪ್ರಜನ್ ಶೆಟ್ಟಿ, ಅಕ್ಷಯ್ ವಾಗ್ಲೆ, 9ನೇ ತರಗತಿಯ
ಅಭಿಷ್ ಎಸ್ ಹಾಗೂ ಬಾಲಿಕಿಯರ ವಿಭಾಗದಲ್ಲಿ 10ನೇ ತರಗತಿಯ ಧ್ರುವಿತಾ ಜಿ.ಡಿ., 9ನೇ
ತರಗತಿಯ ಕೆ.ಸ್ಫೂರ್ತಿ ನಾಯಕ್, ಶ್ರೀಯಾ ಪೂಜಾರಿ ಜಿಲ್ಲಾ ಮಟ್ಟಕ್ಕೆ
ಆಯ್ಕೆಯಾಗಿರುತ್ತಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು
ಅಭಿನಂದಿಸಿದ್ದಾರೆ.






















































