
ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ರೊಟ್ರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು ಇವುಗಳ ವತಿಯಿಂದ ಸೆ.29ರಂದು ಕಾರ್ಕಳ ಟಿಎನ್ಎ ಪೈ ರೋಟರಿ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ‘ಹೃದಯಕ್ಕಾಗಿ ನಡಿಗೆ’ ಎಂಬ ಕಾರ್ಯಕ್ರಮ ನಡೆಯಲಿದೆ.
ಕಾರ್ಕಳದ ಸಿ.ಎ.ಕೆ. ಕಮಲಾಕ್ಷ ಕಾಮತ್ ಅವರು ಬೆಳಗ್ಗೆ 7:30ಕ್ಕೆ ಕಾರ್ಕಳ ಅನಂತಶಯನ ವೃತ್ತದಲ್ಲಿ ಚಾಲನೆ ನೀಡಲಿದ್ದು ಅಲ್ಲಿಂದ ಹೊರಟ ನಡಿಗೆ ಕಾರ್ಕಳಪೇಟೆ ಮುಖ್ಯರಸ್ತೆಯಲ್ಲಿ ಸಾಗಿ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಬಳಿ ಸಂಪನ್ನಗೊಳ್ಳಲಿದೆ.
ಆಸ್ಪತ್ರೆಯ ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ಇರುವುದೊಂದೇ ಹೃದಯ ಅದನ್ನು ರಕ್ಷಿಸಿ’ ಎಂಬ ಕಿರು ಪ್ರಹಸನದ ಸ್ಪರ್ಧೆ ನಡೆಯಲಿದ್ದು ಬಳಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಕೆ ಎಂ ಸಿ ಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹೃದ್ರೋಗ ತಜ್ಞ ಡಾ. ದಿತೇಶ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ ಆದಿರಾಜ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.








































