
ಡಾ| ಟಿ. ಸಿ ರಾಯ್ ರವರ ಜನ್ಮದಿನವಾದ ಜುಲೈ 1ರಂದು ದೇಶದಾದ್ಯಂತ “ರಾಷ್ಟ್ರೀಯ ವೈದ್ಯ ದಿನಾಚರಣೆ”ಯನ್ನು ಆಚರಿಸಲಾಗುತ್ತಿದ್ದು ಆ ಪ್ರಯುಕ್ತ ಜೇಸಿಐ ಕಾರ್ಕಳ ರೂರಲ್ ವತಿಯಿಂದ ಅಧ್ಯಕ್ಷ ಅರುಣ್ ಮಾಂಜ ನೇತೃತ್ವದಲ್ಲಿ ಡಾ | ಎಂ ರವಿರಾಜ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
“ವೈದ್ಯೋ ನಾರಾಯಣೋ ಹರಿ” ಎಂಬ ಮಾತಿನಂತೆ ವೈದ್ಯರು ದೇವರಿಗೆ ಸಮಾನ. ವೈದ್ಯರ ಸೇವೆ ಎಂಬುದು ದೇವರ ಸೇವೆ. ಈ ಮಾತಿನಂತೆ ಡಾ| ಎಂ ರವಿರಾಜ್ ಶೆಟ್ಟಿ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಿ ಜನರ ಪ್ರೀತಿಗೆ ಪಾತ್ರರಾಗಿರುತ್ತಾರೆ. ಕಾಯಕವೇ ಕೈಲಾಸ ಎಂಬಂತೆ 2000 ಕ್ಕೂ ಹೆಚ್ಚಿನ ಮದ್ಯವ್ಯಸನಿಗಳ ಚಟ ಬಿಡಿಸಿ ಸನ್ಮಾರ್ಗ ತೋರಿಸಿರುವುದು ಅವರ ವೃತ್ತಿ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ.