
ವಿಪರೀತ ಮಳೆಯ ಕಾರಣ, ಬಜಗೋಳಿಯಿಂದ ಕೆರ್ವಾಶೆ ಅಜೆಕಾರು ಸಂಪರ್ಕದ ರಸ್ತೆಯನ್ನು ಬಂದ್ ಮಾಡಲಾಗಿದೆ.
ಮುಡಾರು ರಾಮೇರ್ ಗುತ್ತು ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು .ಆದರೆ ಇದೀಗ ವಿಪರೀತ ಮಳೆಯಿಂದಾಗಿ, ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿರದ ಕಾರಣ ರಸ್ತೆಯನ್ನು ಬಂದ್ ಮಾಡಲಾಗಿದ್ದು, ಪರ್ಯಾಯ ರಸ್ತೆಯನ್ನು ಉಪಯೋಗಿಸುವಂತೆ ಸ್ಥಳೀಯರು ತಿಳಿಸಿದ್ದಾರೆ.






















































