ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ, ನೂತನ ಇಂಟ್ರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳವುದರಿಂದ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬಹುದು. ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು.
ಅವರು ಎಸ್.ವಿ.ಟಿ. ವನಿತಾ ಪದವಿಪೂರ್ವ ಕಾಲೇಜು ಕಾರ್ಕಳ ಇಲ್ಲಿನ ನೂತನ ಇಂಟರ್ಯಾಕ್ಟ್ ಕ್ಲಬ್ಬಿನ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷೆ ಕು. ವೀಶ್ವರಿ ಇವರಿಗೆ ಪದ ಪ್ರಧಾನ ಮಾಡಿ ಮಾತನಾಡಿದರು.
ಕಾರ್ಕಳ ರೋಟರಿ ಕ್ಲಬ್ಬಿನ ಇಂಟರ್ಯಾಕ್ಟ್ ಕ್ಲಬ್ಬಿನ ಚೇರ್ಮನ್ ಬಾಲಕೃಷ್ಣ ದೇವಾಡಿಗ ಕ್ಲಬ್ಬಿನ ಬಗ್ಗೆ ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ನೇಮಿರಾಜ್ ಶೆಟ್ಟಿ ಹಾಗೂ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ
ಕು.ವೀಶ್ವರಿ ತನ್ನ ತಂಡವನ್ನು ಪರಿಚಯಿಸಿದರು ಮತ್ತು ಈ ವರ್ಷದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಕ್ಲಬ್ಬಿನ ಎಲ್ಲಾ ಸದಸ್ಯರ ಸಹಕಾರ ಕೋರಿದರು.
ಪೂರ್ವಾಧ್ಯಕ್ಷೆ ಕು.ಅನ್ವಿತಾ ಹಿಂದಿನ ವರ್ಷದ ವರದಿ ಮಂಡಿಸಿದರು.
ಕಾರ್ಯದರ್ಶಿ ಚೇತನ್ ನಾಯಕ್, ರೋಟರಿ ಕ್ಲಬ್ಬಿನ ಸದಸ್ಯರಾದ ವಸಂತ್ ಎಂ, ಇಕ್ಬಾಲ್ ಅಹ್ಮದ್, ಶೇಖರ್ ಎಚ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಇಂಟರಾಕ್ಟ್ ಕ್ಲಬ್ಬಿನ ಮಾರ್ಗದರ್ಶಕ ದೇವದಾಸ್ ಕೆರೆಮನೆ ಸ್ವಾಗತಿಸಿದರು. ಕು.ಸುಶ್ಮಿತಾ ನಿರೂಪಿಸಿದರು. ಕಾರ್ಯದರ್ಶಿ ಕು.ಅರ್ಪಿತಾ ವಂದಿಸಿದರು.
