
ವಿಜೇತ ವಿಶೇಷ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಸಾಹಿತಿ ಹಾಗೂ ನಟರು ಶ್ರೀ ನರೇಂದ್ರ ಕಬ್ಬಿನಾಲೆ ಇವರು ದ್ವಜವನ್ನು ಅರಳಿಸಿದರು ವಿಶೇಷ ಮಕ್ಕಳಿಂದ ಆಕರ್ಷಕ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ನರೇಂದ್ರ ಕಬ್ಬಿನಾಲೆ ಇವರ ಜನ್ಮ ದಿನದ ಪ್ರಯುಕ್ತ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು. ನರೇಂದ್ರ ಕಬ್ಬಿನಾಲೆ, ಕಣ ಪ್ರೊಡಕ್ಷನ್ ಜಿತೇಶ್ ಮಿಜಾರ್, ನಿತಿನ್ ಎಡಪದವು, ಹಾಗೂ ಮಾಧವ್ ಇರುವೈಲ್ ಇವರನ್ನು ಗೌರವಿಸಲಾಯಿತು. ಶಾಲಾ ಶಿಕ್ಷಕರು ನಾಡ ಗೀತೆಯೊಂದಿಗೆ ಕನ್ನಡ ನಾಡಿನ ಮಹತ್ವ ತಿಳಿಸುವ ಹಲವಾರು ಗೀತೆಗಳನ್ನು ಹಾಡಿದರು.








