✨“ದಶಕ ವಿಜಯೋತ್ಸವ” ಹಾಗೂ ಧ್ವಜಾರೋಹಣ, ಗೌರವವಂದನೆ, ಬಹುಮಾನ ವಿತರಣೆ

ಏಪ್ರಿಲ್ 09, ವಿಜೇತ ವಸತಿಯುತ ವಿಶೇಷ ಶಾಲೆ ಮತ್ತು ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಇದರ ದಶಕ ವಿಜೇತೋತ್ಸವ ಹಾಗೂ ಧ್ವಜಾರೋಹಣ ಹಾಗೂ ಗೌರವವಂದನೆ ವಿದ್ಯಾರ್ಥಿ-ಪೋಷಕ ಕ್ರೀಡಾಕೂಟದ ಬಹುಮಾನ ವಿತರಣೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಜಿಲ್ಲಾ ಪಂಚಾಯತ್ PD ಶ್ರೀ ವಿಜಯ್ KAS ದ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿ ಶುಭ ಹಾರೈಸಿದರು.
ಉಡುಪಿ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಶ್ರೀಮತಿ ರತ್ನಾ ಇವರು ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಸಂಸ್ಥೆಯ ಕಾರ್ಯ ವೈಖರಿ ಶ್ಲಾಘಿಸಿದರು .
ಮುಖ್ಯ ಅತಿಥಿಗಳಾಗಿ ವಿಕಾಸ ಸೇವಾ ಪ್ರತಿಷ್ಠಾನ ರಿ. ಅಧ್ಯಕ್ಷರಾದ ಶ್ರೀ ಕೆ. ಸದಾನಂದ ಉಪಾಧ್ಯಾಯ, ಜಗದೀಶ್ ಹೆಗ್ಡೆ ಪಳ್ಳಿ , ಛತ್ರಪತಿ ಫೌಂಡೇಶನ್ ರಿ. ಅಧ್ಯಕ್ಷರಾದ ಜೆಸಿ. ಗಿರೀಶ್ ರಾವ್ , ಜನಪ್ರಿಯ ರೈಸ್ ಮಿಲ್ ಮಾಲ್ಹಕರು ಮಂಜುನಾಥ ಪೂಜಾರಿ, ಉದ್ಯಮಿಗಳಾದ ಉದಯ ಶೆಟ್ಟಿ, ಕೊರಳ ವುಡ್ ಇಂಡಸ್ಟ್ರೀಸ್ ಮಾಲ್ಹಕರಾದ ಚೇತನ್ ಶೆಟ್ಟಿ ಶಾಲಾ ಹಿತೈಷಿಗಳಾದ ಶ್ರೀಮತಿ ಶಾಂತಿ ಕಿಣಿ, ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ ರಿ. ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಟ್ಟಿ, ಶಾಲಾ ಅಧ್ಯಕ್ಷರು ರತ್ನಾಕರ್ ಅಮೀನ್, ಸ್ಥಾಪಕಿ ಡಾ. ಕಾಂತಿ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೋಷಕರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿದ್ದು ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ವಿಜೇತ ವಿಶೇಷ ಶಾಲಾ ಸಿಬ್ಬಂದಿ ವರ್ಗದವರು, ಶಾಲಾ ಮಕ್ಕಳು, ಪೋಷಕರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವಿಶೇಷ ಶಿಕ್ಷಕಿ ಶ್ರೀನಿಧಿ ಅಶೋಕ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಸ್ವಾಗತಿಸಿ ವಿಶೇಷ ಶಿಕ್ಷಕಿ ಶ್ವೇತಾ ವಂದಿಸಿದರು.








