
ಕೋಲಾರ: ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ವಾಲ್ಮೀಕಿ ನಗರದ ಕುರುಬರಪೇಟೆಯ ಮುನೇಶ್ವರ ದೇವಾಲಯದ ದೀಪೋತ್ಸವ ಕಾರ್ಯಕ್ರಮದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪಾತ್ರವಿಲ್ಲ. ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದ್ದು ತನಿಖೆಯ ನಂತರವಷ್ಟೇ ವಾಸ್ತವಾಂಶಗಳು ಹೊರಬರಲಿದೆ ಎಂದು ಹೇಳಿದರು.
ಈ ಹಗಣರದ ಬಗ್ಗೆ ಇಡಿ ಸಂಸ್ಥೆಯಿಂದ ವಿಚಾರಣೆ ನಡೆಯುತ್ತಿದ್ದು ಕಾನೂನು ಪ್ರಕಾರ ಏನಿದೆಯೋ ಅದನ್ನು ಇಡಿ ತನಿಖೆ ನಡೆಸಲಿದ್ದಾರೆ. ಯಾವುದೇ ವಿಷಯದ ಬಗ್ಗೆ ವಿಚಾರಣೆ ನಡೆಯವ ಸಂದರ್ಭದಲ್ಲಿ ಈಗಲೇ ಅಂತಿಮ ನಿರ್ಧಾರ ಹೇಳಲು ಬರುವುದಿಲ್ಲ ಎಂದು ಹೇಳಿದರು.








