20.4 C
Udupi
Monday, February 2, 2026
spot_img
spot_img
HomeBlogವಾರದಲ್ಲಿ 2 ದಿನ ರಜೆ ಸೇರಿದಂತೆ ಹಲವು ಬೇಡಿಕೆ ಈಡೇರಿಕಾಗಿ ಜನವರಿ 27ರಿಂದ ಮುಷ್ಕರದ ಎಚ್ಚರಿಕೆ...

ವಾರದಲ್ಲಿ 2 ದಿನ ರಜೆ ಸೇರಿದಂತೆ ಹಲವು ಬೇಡಿಕೆ ಈಡೇರಿಕಾಗಿ ಜನವರಿ 27ರಿಂದ ಮುಷ್ಕರದ ಎಚ್ಚರಿಕೆ ನೀಡಿದ ಬ್ಯಾಂಕ್ ನೌಕರರು

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ವಾರದಲ್ಲಿ ಎರಡು ದಿನ ರಜೆ ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗೆ ಜನವರಿ 27ರಂದು ಮುಷ್ಕರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆದರೆ ಜನವರಿ 27ಕ್ಕೆ ಬ್ಯಾಂಕ್ ಮುಷ್ಕರ ಆರಂಭಿಸಿದರೆ ಗ್ರಾಹಕರು ಹೈರಾಣಾಗಲಿದ್ದು ಏಕೆಂದರೆ ಜನವರಿ 25 ಹಾಗೂ 26 ಬ್ಯಾಂಕ್ ರಜಾ ದಿನವಾಗಿದೆ. ಜನವರಿ 27ರಂದು ಮುಷ್ಕರ ನಡೆದರೆ , ಒಟ್ಟು ಮೂರು ದಿನ ಬ್ಯಾಂಕ್ ಕೆಲಸಗಳು ನಡೆಯುವುದಿಲ್ಲವಾದ್ದರಿಂದ ಗ್ರಾಹಕರು ಪರದಾಡಲಿದ್ದಾರೆ.

ಆರ್‌ಬಿಐ ಮಾರ್ಗಸೂಚಿ, ಬ್ಯಾಂಕ್ ಅಸೋಸಿಯೇಶನ್ ಒಪ್ಪಂದ ಪ್ರಕಾರ ಬ್ಯಾಂಕ್ ನೌಕರರು ಪ್ರತಿ ದಿನ 40 ನಿಮಿಷ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ರಜಾ ದಿನಗಳು 2024ರಿಂದ ಕಡಿತಗೊಂಡಿದೆ. ಸ್ಟಾಕ್ ಮಾರ್ಟೆಕ್ ಸೇರಿದಂತೆ ಹಲವು ಕ್ಷೇತ್ರಗಳು ಶನಿವಾರ ಕೆಲಸ ಮಾಡುತ್ತಿಲ್ಲ. ಆದರೆ ನಾವು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಬ್ಯಾಂಕ್ ನೌಕರರು ಅಳಲು ತೋಡಿಕೊಂಡಿದ್ದಾರೆ.

2024ರ ಒಪ್ಪಂದದ ಪ್ರಕಾರ ಬ್ಯಾಂಕ್ ನೌಕರರಿಗೆ 2ನೇ ಮತ್ತು ನಾಲ್ಕನೇ ಶನಿವಾರ ರಜಾ ದಿನವಾಗಿದೆ. ಇನ್ನುಳಿದಂತೆ ಎಲ್ಲಾ ಭಾನುವಾರ ರಜಾ ದಿನವಾಗಿದೆ. ಆದರೆ ವಾರದಲ್ಲಿ ಐದು ದಿನ ಕೆಲಸದ ನಿಯಮ ಜಾರಿಯಾಗಬೇಕು. ಬ್ಯಾಂಕ್ ಸಂಬಂಧಿಸಿದ ಹಲವು ಕ್ಷೇತ್ರಗಳು ಶನಿವಾರ ರಜಾ ದಿನವಾಗಿದೆ ಎಂದು ಬ್ಯಾಂಕ್ ನೌಕರರು ರಜೆ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದಾರೆ.

ಒಂದು ದಿನ ಮುಷ್ಕರ ನಡೆಸಿದರೆ ಅತೀ ಹೆಚ್ಚು ಬ್ಯಾಂಕ್ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುವ ಸರ್ಕಾರದ ಬಹುತೇಕ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿದೆ. ಇತ್ತ ಬೇಡಿಕೆ ಈಡೇರಿಕೆಯ ಕುರಿತು ಸ್ಪಷ್ಟ ಆದೇಶ ಹೊರಬೀಳದಿದ್ದರೆ ನೌಕರರು ಮುಷ್ಕರ ಖಚಿತ ಎಂದಿದ್ದು ಸರ್ಕಾರಕ್ಕೆ ಇದು ದೊಡ್ಡ ತಲೆ ನೋವಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page