
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರಿನ ಬೆಲೆ 49 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದೆ.
ಸರಕಾರಿ ತೈಲ ಕಂಪನಿಗಳು ಅಕ್ಟೋಬರ್ ಒಂದರಿಂದ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಏರಿಸಿದ್ದು ಸಿಲಿಂಡರ್ ನ ಬೆಲೆ 1740 ರೂಪಾಯಿ ಆಗಿದೆ. ಗೃಹಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ತೈಲ ಮಾರುಕಟ್ಟೆಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳನ್ನು ಸೆಪ್ಟೆಂಬರ್ ಮತ್ತು ಅಗಸ್ಟ್ ನಲ್ಲೂ ಏರಿಕೆ ಮಾಡಿದ್ದು,
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯ ಹೆಚ್ಚಳ ಹೋಟೆಲ್ ಆಹಾರ ದರಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.































































































































