
ಟಿ. ಆರ್. ಎಸ್. ಅಬಾಕಸ್ ಅಕಾಡೆಮಿ ಆಯೋಜಿಸಿದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯು ತುಮಕೂರಿನಲ್ಲಿ ನೆರವೇರಿತು. ಈ ಸ್ಪರ್ಧೆಯಲ್ಲಿ ಸುಮಾರು 1800 ಮಕ್ಕಳು ಭಾಗವಹಿಸಿದ್ದರು.
ವರ್ಧಮಾನ ಶಿಕ್ಷಣ ಸಂಸ್ಥೆಯ ಏಳನೇ ತರಗತಿಯ ವಿದ್ಯಾರ್ಥಿ ಅಶ್ವಲ್. ಡಿ. ಇವರು CHAMPIONSHIP ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಇವರು ಶ್ರೀಯುತ ದಿನೇಶ್ ಹಾಗೂ ಗಾಯಿತ್ರಿ ದಂಪತಿಗಳ ಪುತ್ರ.
7ನೇ ತರಗತಿಯ ಸಾನ್ವಿತ್ ಇವರು TOPPER ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಇವರು ಶ್ರೀಕಾಂತ್ ಹಾಗೂ ಜಯಂತಿ ದಂಪತಿಗಳ ಪುತ್ರ.
ಪ್ರಶಸ್ತಿ ವಿಜೇತರನ್ನು ವರ್ಧಮಾನ ಶಿಕ್ಷಣ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.



















