
ಜೇಸಿಐ ಭಾರತ ಆಯೋಜನೆ ಮಾಡಿರುವ ಪಬ್ಲಿಕ್ ಸ್ಪೀಕಿಂಗ್ ಸ್ಪರ್ಧೆಗೆ ವಲಯ 15 ರಿಂದ ಆಯ್ಕೆಯಾಗಿರುವ ಏಕೈಕ ಜೇಸಿ ಸದಸ್ಯೆ ಜೇಸಿ ಕರ್ತವ್ಯ ಜೈನ್ ರವರು
ಹರ್ ವಾಯ್ಸ್ ಹರ್ ಪವರ್ ವಿಷಯ ಮಂಡಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಡಿಸೆಂಬರ್ 27, 28, 29 ರಂದು ಚೆನ್ನೈಯಲ್ಲಿ ನಡೆದ ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ವುಮೆನ್ ರೋಲ್ ಇನ್ ಸಸ್ಟೇನೆಬಲ್ ಡೆವಲಪ್ಮೆಂಟ್ ಎಂಬ ವಿಷಯ ಮಂಡಿಸಿ ರಾಷ್ಟ್ರಮಟ್ಟದ ಎಫೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್ ಪ್ರಶಸ್ತಿ ಲಭಿಸಿರುತ್ತದೆ.
ಇವರು ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಜೇಸಿಐ ಕಾರ್ಕಳದ ಸದಸ್ಯೆ ಹಾಗೂ ರೋಟರಾಕ್ಟ್ ಕ್ಲಬ್ ಕಾರ್ಕಳ ಇದರ ಸದಸ್ಯೆಯಾಗಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರಾದ ಶಶಿಕಲಾ. ಕೆ. ಹೆಗ್ಡೆ, ಕುಮಾರಯ್ಯ ಹೆಗ್ಡೆ, ಜಗದೀಶ್ ಹೆಗ್ಡೆ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.





