ಮುಖ್ಯ ಅತಿಥಿಯಾಗಿ ಸುಬೇದಾರ್ ಅಜಿತ್ ಕುಮಾರ್ ಜೈನ್ ರೆಂಜಾಳ, ಹವಲ್ದಾರ್ ವಿಜಯಾನಂದ.ಕೆ

ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು, ಕಾರ್ಕಳ ಇಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಬೇದಾರ್ ಅಜಿತ್ ಕುಮಾರ್ ಜೈನ್ ರೆಂಜಾಳ. ಮಾಜಿ ಭೂಸೇನಾ ಸೈನಿಕರು ಹಾಗೂ ಹವಲ್ದಾರ್ ವಿಜಯಾನಂದ.ಕೆ. ಮಾಜಿ ಸೈನಿಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಪುಷ್ಪಾರ್ಚನೆ ಗೈದು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ಸುಬೇದಾರ್ ಅಜಿತ್ ಕುಮಾರ್ ಜೈನ್ ಹಾಗೂ ಹವಾಲ್ದಾರ್ ವಿಜಯಾನಂದ. ಕೆ. ಇವರನ್ನು ಸನ್ಮಾನಿಸಲಾಯಿತು. ಸುಬೇದಾರ್ ಅಜಿತ್ ಕುಮಾರ್ ಜೈನ್ ರವರು ಮಕ್ಕಳಿಗೆ ಬಾಲ್ಯದಲ್ಲಿ ದೇಶಪ್ರೇಮವನ್ನು ಮೂಡಿಸಬೇಕು. ಮುಗ್ಧ ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮವನ್ನು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ ವರ್ಧಮಾನ ವಿದ್ಯಾ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಶುಭವನ್ನು ಹಾರೈಸಿದರು. ಹವಾಲ್ದಾರ್ ವಿಜಯಾನಂದ. ಕೆ. ಇವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಅನುಭವ ಹಾಗೂ ದೇಶಕ್ಕಾಗಿ ಯೋಧರ ತ್ಯಾಗ ಬಲಿದಾನದ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಜಗದೀಶ್ ಹೆಗ್ಡೆಯವರು ವರ್ಧಮಾನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾರತ ದೇಶದ ಯೋಧರಾಗಿ ಸೇವೆ ಗೈಯುವಂತಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕಿ ಶಶಿಕಲಾ. ಕೆ. ಹೆಗ್ಡೆಯವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ನಿರ್ಭಯವಾಗಿ ಹಗಲಿರುಳು ಎನ್ನದೆ ಹೋರಾಡಿದ ಕೆಚ್ಚೆದೆಯ ಯೋಧರಿಗೆ ಹೃದಯಸ್ಪರ್ಶಿ ಗೌರವವನ್ನು ಸಲ್ಲಿಸೋಣ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಕುಮಾರಯ್ಯ ಹೆಗ್ಡೆಯವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಕರ್ತವ್ಯ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಶಿಕ್ಷಕರ ವೃಂದದವರು ಹಾಗೂ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡುವುದರ ಮುಖಾಂತರ ವೀರಯೋಧರಿಗೆ ನಮನಗೈದರು.
ವರ್ಧಮಾನ ಪೂರ್ವ ಪ್ರಾಥಮಿಕ ಶಾಲೆ ಶಿವತಿಕೆರೆ, ಕಾರ್ಕಳ ಇಲ್ಲಿಯ ಪುಟಾಣಿಗಳು ದೀಪ ಬೆಳಗಿ ಹುತಾತ್ಮರಾದ ಸೈನಿಕರಿಗೆ ನಮನ ಸಲ್ಲಿಸಿದರು.












