
ಜು.30 ರಂದು ಸರಕಾರಿ ಪದವಿ ಪೂರ್ವ ಕಾಲೇಜು, ಕಾರ್ಕಳದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಆಯೋಜಿಸಿದ್ದ 14 ರ ವಯೋಮಿತಿ ಒಳಗಿನ ಚೆಸ್ ಪಂದ್ಯಾಟದಲ್ಲಿ ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು ಇಲ್ಲಿಯ 7ನೇ ತರಗತಿಯ ವಿದ್ಯಾರ್ಥಿನಿಯಾದ ಸನ್ನಿಧಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.
ಇವರು ಸಂತೋಷ್ ರಾವ್ ಹಾಗೂ ದೀಕ್ಷಾ ರವರ ಪುತ್ರಿಯಾಗಿರುತ್ತಾರೆ.