
ಹೆಬ್ರಿ :ಕರ್ತವ್ಯ ನಿಷ್ಠೆ, ಶೃದ್ದೆ, ಪ್ರಾಮಾಣಿಕತೆಯ ಸೇವೆಗೆ ದೇವರು ಸದಾ ಒಲಿಯುತ್ತಾನೆ. ಭಕ್ತಿಯ ಆರಾಧನೆಯಿಂದ ನಮ್ಮೆಲ್ಲರ ಬಾಳಿಗೆ ಒಳಿತಾಗಲಿ. ಅಯ್ಯಪ್ಪ ವೃತಾಚರಣೆಯ ಫಲ ಎಲ್ಲರಿಗೂ ಸಿಗಲಿ. ಸಾಧಕರನ್ನು ಸನ್ಮಾನಿಸುವ ಮೂಲಕ ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯವಾದುದು ಎಂದು ಜ್ಯೋತಿಷಿ ವೇದಮೂರ್ತಿ ಎಣ್ಣೆಹೊಳೆ ಜಯರಾಮ ಭಟ್ ಸಭಾಭವನದ ಅರುಣ್ ಭಟ್ ಹೇಳಿದರು.

ಅವರು ವರಂಗ ಅಯ್ಯಪ್ಪ ಸ್ವಾಮಿ ಭಕ್ತವೃಂದದ ವತಿಯಿಂದ ನಡೆದ ಇರುಮುಡಿ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮುನಿಯಾಲು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ಶಂಕರ ಶೆಟ್ಟಿ ಮುನಿಯಾಲು, ಮುಳ್ಳುಗುಡ್ಡೆ ಕೊರಗಜ್ಜ ದೈವಸ್ಥಾನದ ಧರ್ಮದರ್ಶಿಗಳಾದ ಪುನೀತ್, ವರಂಗದ ಪ್ರಸಿದ್ಧ ವೈದ್ಯರಾದ ಡಾ. ವಸಂತ್, ಹೆಬ್ರಿಯ ವಕೀಲರಾದ ಕೃಷ್ಣ ಶೆಟ್ಟಿ, ಹೆಬ್ರಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಗೋಪಾಲ ಕುಲಾಲ್ ಪಾಲ್ಗೊಂಡು ಮಾತನಾಡಿದರು. ವೇದಿಕೆಯಲ್ಲಿ ವರಂಗ ಸಿ. ಎ. ಬ್ಯಾಂಕ್ ಅಧ್ಯಕ್ಷರಾದ ಲಕ್ಷ್ಮಣ ಆಚಾರ್ಯ, ಹಿರಿಯರಾದ ಶಂಕರ್ ಶೆಟ್ಟಿ, ವಿಠ್ಠಲ ಪೂಜಾರಿ, ಲಕ್ಷ್ಮೀ ಪೂಜಾರಿ ಪಡುಬೆಟ್ಟು, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ದೇವಾಡಿಗ, ಅಯ್ಯಪ್ಪ ಸ್ವಾಮಿ ಭಕ್ತವೃಂದದ ಗೌರವಾಧ್ಯಕ್ಷ ಸೂರ್ಯ ದೇವಾಡಿಗ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾ ಆರ್. ಭಟ್ ವರಂಗ, ಶಾಂತಿವನ ಟ್ರಸ್ಟ್ ಜ್ಞಾನರಥ ಪುಸ್ತಕ ಆಧಾರಿತ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ವಿಜೇತರಾದ ಆರಾದ್ಯ ಆರ್. ಪೂಜಾರಿ, ವಿಶೇಷಚೇತನ ವಿದ್ಯಾರ್ಥಿಗಳಿಗೆ ನಡೆಸಿದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಈಟಿ ಎಸೆತ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದ ಸಾತ್ವಿಕ್ ಕುಲಾಲ್ ಹಾಗೂ ಅಯ್ಯಪ್ಪ ಸ್ವಾಮಿ ಶಿಬಿರಕ್ಕೆ ಟೈಲ್ಸ್ ವ್ಯವಸ್ಥೆ ಒದಗಿಸಿದ ಅಶ್ವಥ್ ಎಳ್ಳಾರೆ ಅವರನ್ನು ಸನ್ಮಾನಿಸಲಾಯಿತು. ಸುರೇಶ್ ಪೂಜಾರಿ ಸ್ವಾಗತಿಸಿ, ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಅಧ್ಯಕ್ಷ ಹರೀಶ್ ಗುರುಸ್ವಾಮಿ ವಂದಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು.





