26.7 C
Udupi
Wednesday, July 29, 2026
spot_img
spot_img
HomeBlog"ಲೋಕಹಿತಕ್ಕೆ ಮಿಡಿದ ಕುಂತಿಯ ಧರ್ಮಪ್ರಜ್ಞೆ"

“ಲೋಕಹಿತಕ್ಕೆ ಮಿಡಿದ ಕುಂತಿಯ ಧರ್ಮಪ್ರಜ್ಞೆ”

ಮಹಾಭಾರತ ಭಾವದೀಪ ಉಪನ್ಯಾಸಮಾಲೆಯ ಸಪ್ತಮ ಸೋಪಾನ ಕಾರ್ಯಕ್ರಮ

ಏಕಚಕ್ರಾ ನಗರದಲ್ಲಿ ಕುಂತಿ ತನ್ನ ಐವರು ಮಕ್ಕಳೊಂದಿಗೆ ಒಂದು ಬ್ರಾಹ್ಮಣರ ಮನೆಯಲ್ಲಿ ವಾಸವಿದ್ದ ಸಂದರ್ಭ. ಆ ಊರಿನಲ್ಲಿರುವ ಬಕಾಸುರನೆಂಬ ರಾಕ್ಷಸನಿಗೆ ಆಹಾರವಾಗುವುದಕ್ಕಾಗಿ ಮನೆಯಲ್ಲಿ ಪೈಪೋಟಿ ಮತ್ತು ರೋದನ ನಡೆಯುತ್ತಿರುವುದನ್ನು ಗಮನಿಸಿದ ಕುಂತಿ ಅವರ ಕೂಗು ಅರಣ್ಯರೋದನವಾಗದಂತೆ ಆಕೆ ಅಲ್ಲಿ ನಿರ್ವಹಿಸಿದ ಪಾತ್ರ ನಿರ್ಣಾಯಕವಾಗಿತ್ತು. ಕುಂತಿ ಅವರನ್ನು ಯಾರನ್ನೂ ಕಳಿಸದೆ ಆಕೆ ಅವರಿಗೆ ಅಭಯ ನೀಡಿ ತನ್ನ ಮಗ ಭೀಮನನ್ನು ಕಳಿಸುತ್ತಾಳೆ. ಭೀಮನಿಂದ ರಾಕ್ಷಸ ಬಕಾಸುರನ ವಧೆಯಾಗಿ ಊರಿಗೆ ಕ್ಷೇಮವಾಗುತ್ತದೆ. ಇಲ್ಲಿ ಕುಂತಿ ತನ್ನ ಮಕ್ಕಳ ಬಗ್ಗೆ ಮಾತ್ರ ಯೋಚಿಸದೆ ಆಕೆಯ ಸೂಕ್ಷ್ಮತೆ ಮತ್ತು ಧರ್ಮಪ್ರಜ್ಞೆ ಲೋಕಹಿತಕ್ಕೂ ವಿಸ್ತೃತವಾಯಿತು ಎಂಬುದಾಗಿ ಡಾ. ವಿನಾಯಕ ಭಟ್ ಗಾಳಿಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.


ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷ ಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ಸಪ್ತಮ ಸೋಪಾನದಲ್ಲಿ ಅವರು ‘ಕೃಷ್ಣ ಮತ್ತು ಕೃಷ್ಙೆ’ ಎಂಬ ಕುರಿತಾಗಿ ಜುಲೈ ೨೫ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಜ್ಞದಿಂದಲೇ ಹುಟ್ಟಿದ ದ್ರೌಪದಿಯ ಬದುಕೆಲ್ಲ ಅಗ್ನಿಮಯ. ಕೃಷ್ಣ ವರ್ಣದವಳಾಗಿ ಮತ್ತು ಶ್ರೀಕೃಷ್ಣ ಅವಳನ್ನು ರಕ್ಷಿಸಿದ್ದರಿಂದಲೂ ಆಕೆ ಕೃಷ್ಣೆ ಎನಿಸಿಕೊಂಡವಳು. ದ್ರೌಪದೀ ಸ್ವಯಂವರದ ಸನ್ನಿವೇಶದಲ್ಲಿ ಕೃಷ್ಣ ಕೃಷ್ಣೆಯರ ಹಾಗೂ ಪಾಂಡವರ ಸಮಾಗಮವಾಗುತ್ತದೆ. ಅದಕ್ಕೂ ಮಿಗಿಲಾಗಿ ಕೌರವರ ಲೆಕ್ಕದಲ್ಲಿ ಕೊಲ್ಲಲ್ಪಟ್ಟಂತಹ ಪಾಂಡವರು ಸಾಯದೆ ಬದುಕಿ ಬಂದಿದ್ದಾರೆ ಅನ್ನುವುದನ್ನು ತಿಳಿದ ಧೃತರಾಷ್ಟ್ರ ಕೌರವರಿಗೆ ಮುಂದೇನು ಅನ್ನುವ ಮಹಾಭಾರತದ ಸನ್ನಿವೇಶ ತೆರೆದುಕೊಳ್ಳುತ್ತದೆ ಎಂದರು.
ಅ.ಭಾ.ಸಾ.ಪ.ದ ಗೌರವಾಧ್ಯಕ್ಷರಾದ ನಿತ್ಯಾನಂದ ಪೈ, ಅಧ್ಯಕ್ಷರಾದ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈ. ಅನಂತಪದ್ಮನಾಭ ಭಟ್ ಪ್ರಾರ್ಥಿಸಿದರು. ಶ್ರೀಮತಿ ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ ಗೋಖಲೆ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page