27.2 C
Udupi
Friday, March 14, 2025
spot_img
spot_img
HomeBlogಲೋಕಸಭೆಗೆ ಇಂದು ಆರನೇ ಹಂತದ ಚುನಾವಣೆ:8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ

ಲೋಕಸಭೆಗೆ ಇಂದು ಆರನೇ ಹಂತದ ಚುನಾವಣೆ:8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ

ನವದೆಹಲಿ: ಇಂದು ಲೋಕಸಭೆಗೆ ಆರನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟು 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಇಂದು ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿದ್ದು ಬಿಹಾರದ 8, ಹರಿಯಾಣದ ಎಲ್ಲಾ 10 ಸ್ಥಾನಗಳು, ಜಮ್ಮು ಮತ್ತು ಕಾಶ್ಮೀರದ 1 ಸ್ಥಾನ, ಜಾರ್ಖಂಡ್‌ನ 4 ಸ್ಥಾನ, ದೆಹಲಿಯ ಎಲ್ಲಾ 7 ಸ್ಥಾನಗಳು, ಒಡಿಶಾದಲ್ಲಿ 6, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 8 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಅಖಾಡದಲ್ಲಿ ಒಟ್ಟು 889 ಅಭ್ಯರ್ಥಿಗಳಾಗಿದ್ದು 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5,120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. 8.93 ಲಕ್ಷಕ್ಕೂ ಹೆಚ್ಚು ನೋಂದಾಯಿತ 85+ ವರ್ಷದ, 23,659 100 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಮತ ಚಲಾಯಿಸಲಿದ್ದಾರೆ.

ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯಲು 20 ವಿಶೇಷ ರೈಲುಗಳನ್ನು ನಿಯೋಜಿಸಿದ್ದು, 184 ವೀಕ್ಷಕರು, 2,222 ಫ್ಲೈಯಿಂಗ್‌ ಸ್ಕ್ವಾಡ್‌ಗಳ ನೇಮಿಸಲಾಗಿದೆ. 257 ಅಂತರಾಷ್ಟ್ರೀಯ ಗಡಿ ಚೆಕ್‌ಪೋಸ್ಟ್‌ಗಳು, 927 ಅಂತರ-ರಾಜ್ಯ ಗಡಿ ಚೆಕ್‌ಪೋಸ್ಟ್‌ಗಳು ನಿಯೋಜನೆ ಮಾಡಿದ್ದು, ಚುನಾವಣಾ ಗಲಭೆ ತಡೆಯಲು ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರದ ಮೀಸಲು ಪಡೆಗಳನ್ನು ಆಯೋಜಿಸಲಾಗಿದೆ.

ಆರನೇ ಹಂತದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ನವದೆಹಲಿ – ಬನ್ಸೂರಿ ಸ್ವರಾಜ್ (ಬಿಜೆಪಿ)
ಈಶಾನ್ಯ ದೆಹಲಿ – ಮನೋಜ್ ತಿವಾರಿ (ಬಿಜೆಪಿ), ಕನ್ಹಯ್ಯಾ ಕುಮಾರ್ (ಕಾಂಗ್ರೆಸ್)
ರೊಹ್ಟಕ್ – ದೀಪೇಂದ್ರ ಸಿಂಗ್ ಹೂಡಾ (ಕಾಂಗ್ರೆಸ್)
ಸಂಬಲ್‌ಪುರ – ಧರ್ಮೇಂದ್ರ ಪ್ರಧಾನ್ (ಬಿಜೆಪಿ)
ಸುಲ್ತಾನ್‌ಪುರ – ಮೇನಕಾ ಗಾಂಧಿ (ಬಿಜೆಪಿ),
ಅನಂತನಾಗ್ ರಜೌರಿ- ಮೆಹಬೂಬಾ ಮುಫ್ತಿ (ಪಿಡಿಪಿ)
ತಮ್ಲುಕ್ – ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ)
ಕರ್ನಾಲ್ – ಮನೋಹರ್ ಲಾಲ್ ಖಟ್ಟರ್ (ಬಿಜೆಪಿ)
ಕುರುಕ್ಷೇತ್ರ – ನವೀನ್ ಜಿಂದಾಲ್ (ಬಿಜೆಪಿ)
ಗುರ್‌ಗಾಂವ್ – ಇಂದರ್‌ಜಿತ್ ಸಿಂಗ್ (ಬಿಜೆಪಿ)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page