21.6 C
Udupi
Monday, February 16, 2026
spot_img
spot_img
HomeBlogಲೇಖಕಿ ಶಿಕ್ಷಕಿ ಸೀಮಾ ಕಾಮತ್ ಅವರ ಚಿರಾಗ್ ಪುಸ್ತಕ ಬಿಡುಗಡೆ

ಲೇಖಕಿ ಶಿಕ್ಷಕಿ ಸೀಮಾ ಕಾಮತ್ ಅವರ ಚಿರಾಗ್ ಪುಸ್ತಕ ಬಿಡುಗಡೆ

spot_imgspot_img

ಡಿಸೆಂಬರ್ 26 ರಂದು ಲೇಖಕಿ ಶಿಕ್ಷಕಿ ಸೀಮಾ ಕಾಮತ್ ಅವರ ಐದನೇ ಪುಸ್ತಕ ಚಿರಾಗ್ ಬಿಡುಗಡೆಗೊಂಡಿತು. ಕಾರ್ಕಳದ ಶಿರ್ಡಿ ಸಾಯಿ ಬಾಬಾ ಮಂದಿರದಲ್ಲಿ ಕಮಲಾಕ್ಷ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ಜರುಗಿದ್ದು, ಶಿಕ್ಷಕಿ ಶೈಲಜಾ ಹೆಗ್ಡೆ, ಲೇಖಕಿ ಸಾವಿತ್ರಿ ಮನೋಹರ್,ಅವರು ಅತಿಥಿಗಳಾಗಿ ಆಗಮಿಸಿದ್ದು ಬಹುಮುಖ ಪ್ರತಿಭೆಯ ಸೀಮಾ ಕಾಮತ್ ಅವರು ಮೂರು ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದನ್ನು ಶ್ಲಾಘಿಸಿದರು.

ಕಮಲಾಕ್ಷ ಕಾಮತ್ ಅವರು ಮುಂಬರುವ ದಿನಗಳಲ್ಲಿ ಇನ್ನಷ್ಟು ಕಥೆ, ಕವನಗಳು ಮೂಡಿ ಬರಲೆಂದು ಶುಭಾಷಯದ ಮಾತುಗಳನ್ನಾಡಿದರು.ಲೇಖಕಿ ಸೀಮಾ ಕಾಮತ್ ಅವರು ಮಾತನಾಡಿ, ಈ ಪುಸ್ತಕ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ರಚಿಸಿದ್ದು, ಇದರಲ್ಲಿ ಮಕ್ಕಳು ಅಳವಡಿಸಿಕೊಳ್ಳಬಹುದಾದ ಉದಾತ್ತ ಗುಣಗಳಿವೆ. ಇದು ಕಾಲ್ಪನಿಕ ಕಥೆಯಾಗಿದ್ದು ಓದುಗರನ್ನು ಬೇರೊಂದು ಲೋಕಕ್ಕೆ ಕೊಂಡೋಯುತ್ತದೆ ಅಂದರು.ಇದಕ್ಕೂ ಮೊದಲು ಲೇಖಕಿ ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದು, ಇದು ಹಿಂದಿ ಸಾಹಿತ್ಯದ ಪ್ರಥಮ ಹೆಜ್ಜೆಯಾಗಿದೆ. ಕಾರ್ಯಕ್ರಮದಲ್ಲಿ ಶ್ರೀಮತಿ ಸುವರ್ಣ, ಮೇಕ್ಅಪ್ ಆರ್ಟಿಸ್ಟ್ ಶಿಲ್ಪಾ ಕಿಣಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇಣಿ ಸುಬ್ರಹ್ಮಣ್ಯ ಭಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page