
ಬೆಳ್ಮಣ್ ಲಯನ್ಸ್ ಕ್ಲಬ್ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಇತ್ತೀಚೆಗೆ ನಡೆಯಿತು.ಸಭೆಯಲ್ಲಿ ಲಯನ್ ಬಿ. ಎಚ್. ಶಿವರಾಮ್ ಅಚಾರ್ಯ ಅವರು ಅಧ್ಯಕ್ಷರಾಗಿ, ಲಯನ್ ಟೀನಾ ಡೇಸಾ ಅವರು ಕಾರ್ಯದರ್ಶಿಯಾಗಿ ಹಾಗೂ ಲಯನ್ ಗ್ರೆಗೊರಿ ನೊರೊನ್ಹಾ ಅವರು ಕೋಶಾಧಿಕಾರಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು.
ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ ಸದಸ್ಯರು, ಮುಂಬರುವ ಸಾಲಿನಲ್ಲಿ ಇನ್ನಷ್ಟು ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಕ್ಲಬ್ ಅನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬೆಳ್ಮಣ್ ಸೇವಾ ಟ್ರಸ್ಟ್ ಅಧ್ಯಕ್ಷ ಲಯನ್ ಸೀತಾರಾಮ್ ಭಟ್, ಪಿಡಿಜಿ ಲಯನ್ ಎನ್. ಎಂ. ಹೆಗಡೆ, ಲಿಯೋ ಚಟುವಟಿಕೆಗಳು ಹಾಗೂ ಕ್ಲಬ್ ವಿಸ್ತರಣಾ ಸಂಯೋಜಕಿ ಲಯನ್ ಸುಝಾನ್ ಕ್ಯಾಸ್ಟಲಿನೊ, ಮಾಜಿ ಅಧ್ಯಕ್ಷ ಲಯನ್ ರಂಜಿತ್ ಕೆ. ಎಸ್., ಮಾಜಿ ಕಾರ್ಯದರ್ಶಿ ಲಯನ್ ಸದಾನಂದ ಶೆಟ್ಟೆಗಾರ್, ಲಯನ್ ಫಾಷಿನ್ ಡಿಸೋಜ, ಲಯನ್ ಸಂಧ್ಯಾ ಹೆಗಡೆ, ಲಯನ್ ಚಿನ್ಮಯಿ ಶೆಣೈ ಹಾಗೂ ಬೆಳ್ಮಣ್ ಲಿಯೋ ಕ್ಲಬ್ ಸದಸ್ಯರು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಜೂನ್ 6 ರಂದು ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಲಯನ್ಸ್ ಜಿಲ್ಲೆ 317B ಯ GLT ಸಂಯೋಜಕರಾದ ಲಯನ್ ಅಶೋಕ್ ಹೆಗಡೆ ಅವರು ಪ್ರಮಾಣವಚನ ಗೈಯಲ್ಲಿಕ್ಕಿದ್ದಾರೆ




























