
ರೋಟರಿ ಕ್ಲಬ್ ಕಾರ್ಕಳ ಪ್ರಾಯೋಜಿತ ಇಂಟರ್ಯಾಕ್ಟ್ ಕ್ಲಬ್ ಎಸ್. ವಿ. ಟಿ. ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇದರ ಪದಗ್ರಹಣ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ನೂತನ ಅಧ್ಯಕ್ಷ ಕಾರ್ಯದರ್ಶಿಯವರಿಗೆ ಪದಪ್ರದಾನ ಮಾಡಿ ಮಾತನಾಡಿದ ಕಾರ್ಕಳ ರೋಟರಿ ಕ್ಲಬ್ ಇದರ
ಅಧ್ಯಕ್ಷ ಕೆ. ವಿಜೇಂದ್ರ ಕುಮಾರ್ ನಾಯಕತ್ವವನ್ನು ಬೆಳೆಸಿಕೊಳ್ಳಲು ಇದೊಂದು ಉತ್ತಮ ವೇದಿಕೆ ಇದರ ಸದಪಯೋಗ ಪಡೆದುಕೊಳ್ಳಿ ಎಂದರು..
ಇಂಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷೆ ವೀಶ್ವರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಂಟರ್ಯಾಕ್ಟ್ ಸಭಾಪತಿ ಶೇಖರ್ ಹೆಚ್ ಕ್ಲಬ್ಬಿನ ವತಿಯಿಂದ ಮಾಡಬಹುದಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಅರ್ಪಿತ ವಾರ್ಷಿಕ ವರದಿಯನ್ನು ವಾಚಿಸಿದರು. ನೂತನ ಅಧ್ಯಕ್ಷೆ ಪ್ರಣಮ್ಯ ತನ್ನ ತಂಡದ ಪರಿಚಯ ಮಾಡಿ ಮುಂದಿನ ವರ್ಷದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಉದಯ ಕಡಂಬ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನೇಮಿರಾಜ್ ಶೆಟ್ಟಿ ಕೆ, ಪ್ರೌಢಶಾಲಾ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್, ಸಂಯೋಜಕ ಮಾರ್ಗದರ್ಶಕ ಶಿಕ್ಷಕ ದೇವದಾಸ್ ಕೆರೆಮನೆ, ಕಾರ್ಯದರ್ಶಿ ದೇವಿಕಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮೀಕ್ಷಾ ಸ್ವಾಗತಿಸಿದರು. ಕೀರ್ತನ ನಾಯಕ್ ನಿರೂಪಿಸಿ ಅಕ್ಷಯ ವಂದಿಸಿದರು.


















































